Breaking News

ಈ ಬಾರಿ 5.9 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ಗಡುವು ಮುಕ್ತಾಯ..

ಗಡುವು ಮುಕ್ತಾಯದ ದಿನದಂದು 5.9 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ಮುಕ್ತಾಯದ ದಿನದಂದು 5.9 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದಕ್ಕೆ ಆ.31ರಂದು ಗಡುವು ಮುಕ್ತಾಯಗೊಂಡಿದ್ದು, 5.29 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 
ಈ ವರ್ಷ ಒಟ್ಟಾರೆ 5,29,66,509 ಐಟಿಆರ್ ಎಸ್ ಗಳನ್ನು ತೆರಿಗೆದಾರರು ಸಲ್ಲಿಕೆ ಮಾಡಿದ್ದು, ಒಂದೇ ದಿನದಲ್ಲಿ 22 ಲಕ್ಷದ ವರೆಗೆ ಐಟಿ ರಿಟರ್ನ್ಸ್ ನ್ನು ಐಟಿ ಇಲಾಖೆ ಸ್ವೀಕರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ.31 ರಂದು ಮಧ್ಯ ರಾತ್ರಿ ವರೆಗೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದ್ದು 
ಕಳೆದ ವರ್ಷ 3.2 ಕೋಟಿಯಷ್ಟು ಐಟಿಆರ್ ಎಸ್ ನ್ನು ಸಲ್ಲಿಕೆ ಮಾಡಲಾಗಿತ್ತು, ಈ ವರ್ಷ ಶೇ.60 ರಷ್ಟು ಐಟಿಆರ್ ಎಸ್ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೋಟು ನಿಷೇಧದ ನಂತರ ಹೆಚ್ಚಾದ ತೆರಿಗೆದಾರರ ಸಂಖ್ಯೆ ಹಾಗೂ ಐಟಿಆರ್ ಎಸ್ ನ್ನು ವಿಳಂಬವಾಗಿ ಸಲ್ಲಿಸುವವರಿಗೆ ದಂಡ ವಿಧಿಸುವ ನಿಯಮ ಜಾರಿಗೊಳಿಸಿರುವುದರಿಂದ ಗಡುವಿಗೂ ಮುನ್ನವೇ ಐಟಿ ರಿಟರ್ನ್ಸ್ ಸಲ್ಲಿಕೆ ಕಳೆದ ಬಾರಿಗಿಂತ ಏರಿಕೆ ಕಂಡಿದೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *