ಇಂಧನ ಸೇರಿ ಜೀವನಾಂಶ ವಸ್ತುಗಳ ಮೇಲಿನ ಬೆಲೆ ಏರಿಕೆಯನ್ನ ಖಂಡಿಸಿ ನಾಳೆ ದೇಶದಾದ್ಯಂತ ಕರೆ ನೀಡಿರೋ ಭಾರತ್ ಬಂದ್ ಗೆ ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಬೆಂಬಲ ವ್ಯಕ್ತವಾಗಿದೆ. ನಾಳೆಯ ಬಂದ್ ಹಿನ್ನೆಲೆಯಲ್ಲಿ ಇವತ್ತು ಕಾಂಗ್ರೆಸ್ ಕಾರ್ಯಕರ್ತರು ಹುಬ್ಬಳ್ಳಿಯ ದುರ್ಗದ್ ಬೈಲ್ ನಲ್ಲಿ ವಿಶಿಷ್ಟ ರ್ಯಾಲಿ ನಡೆಸಿದ್ರು. ದ್ವಿಚಕ್ರ ವಾಹನ ಹಾಗೂ ಆಟೋಗಳನ್ನ ತಾವೇ ತಳ್ಳುತ್ತಾ, ಅಂಗಡಿ ಮುಂಗಟ್ಟು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದ್ರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಅಂತ ಆರೋಪಿಸಿದ್ರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದ್ರು.
ನಾಳೆಯ ಬಂದ್ ಗೆ ಜಿಲ್ಲೆಯ ಬಹುತೇಕ ಸಂಘಟನೆಗಳು ಬೆಂಬಲವನ್ನ ಸೂಚಿಸಿವೆ. ಕಾರ್ಮಿಕ, ಆಟೋ, ಲಾರಿ-ಟ್ಯಾಕ್ಸಿ ಚಾಲಕ-ಮಾಲೀಕರ ಸಂಘ, ಎಪಿಎಂಸಿ, ಕೆಎಸ್ ಆರ್ ಟಿಸಿ ನೌಕರರ ಸಂಘ,ಹೋಟೆಲ್ ಮಾಲೀಕರ ಸಂಘ, ಕನ್ನಡಪರ, ದಲಿಪರ ಸಂಘಟನೆಗಳು ಹಾಗೂ ಕಳಸಾ ಬಂಡೂರಿ ಹೋರಾಟಗಾರರು ಸೇರಿದಂತೆ ಪ್ರತಿಯೊಂದು ಸಂಘಟನೆಗಳು ಬಂದ್ ಗೆ ತಮ್ಮ ಬೆಂಬಲವನ್ನ ಸೂಚಿಸಿವೆ.
ಬಂದ್ ಹಿನ್ನೆಲೆಯಲ್ಲಿ ನಾಳೆ ಧಾರವಾಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ರಜೆ ಘೋಷಿಸಿ ಜಿಲ್ಲಾಧಿಕಾರಿ ದೀಪಾ ಎಂ. ಚೋಳನ್ ಆದೇಶಿಸಿದಾರೆ. ರಜಾ ಅವಧಿಗಳನ್ನು ಸರಿದೂಗಿಸಲು ಶನಿವಾರ ಪೂರ್ಣದಿನದ ತರಗತಿಗಳನ್ನು ನಡೆಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದಾರೆ.
ಧಾರವಾಡ ಜಿಲ್ಲಾಧಿಕಾರಿ ದೀಪಾ ಎಂ. ಚೋಳನ್ ಫೈಲ್ ವಿಸುವಲ್ ಕಳುಹಿಸಲಾಗಿದೆ ಬಳಸಿ
ನಾಳೆಯ ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿನಗರ ಸೇರಿದಂತೆ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನ ಕಲ್ಪಿಸಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೂ ಬಂದ್ ಆಚರಿಸೋದಕ್ಕೆ ಅವಕಾಶ ಕಲ್ಪಿಸಿರೋದಾಗಿ ಅವಳಿನಗರ ಪೊಲೀಸ್ ಕಮೀಷನ್ ಎಂ.ಎನ್ ನಾಗರಾಜ್ ತಿಳಿಸಿದಾರೆ. ಅಷ್ಟೇ ಅಲ್ಲ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ಮೊಬೈಲ್ ಕಮಾಂಡೋ ವಾಹನ ಗಸ್ತು ತಿರುಗಲಿದೆ. ಇದಷ್ಟೇ ಅಲ್ಲ, ಆರು ಎಸಿಪಿಗಳು, 24 ಪಿಎಸ್ಐ, 24 ಪೊಲೀಸ್ ಇನ್ಸ್ ಪೆಕ್ಟರ್, 940 ಪೊಲೀಸ್ ಪೇದೆ, 4 ಕೆಎಸ್ ಆರ್ ಪಿ, 13 ಸಿಟಿ ಆರ್ಮ್ ತುಕಡಿ, 3 ಆ್ಯಂಬುಲೆನ್ಸ್, 1 ವಾಟರ್ ಜೆಟ್, 3 ಅಗ್ನಿ ಶಾಮಕ ದಳವನ್ನ ಭದ್ರತೆಗೆಂದು ನಿಯೋಜಿಸಲಾಗಿದೆ.
ಕಮೀಷನರ್ ಎಂ.ಎನ್ ನಾಗರಾಜ್ ಫೈಲ್ ವಿಸುವಲ್ಸ್ ಹಾಕಿರುವೆ
ನಾಳೆಯ ಬಂದ್ ನಿಂದಾಗಿ ಆಟೋ- ಟ್ಯಾಕ್ಸಿ, ಸಾರಿಗೆ ಸಂಸ್ಥೆ ಬಸ್ ಗಳು ಸಹ ಓಡಾಟ ನಡೆಸೋದಿಲ್ಲ. ಆದ್ರೇ, ಹಾಲು, ಆಸ್ಪತ್ರೆ, ಮೆಡಿಕಲ್ ಶಾಪ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





