Breaking News

ಹುಬ್ಬಳ್ಳಿಯ ಈ ಚೆಂದುಳ್ಳಿ ಚೆಲುವೆ ಈಗ ಮಿಸ್ ಭಾರತ್ ಅರ್ಥ್..

ಈಗ ಸಾಧಿಸ್ಬೇಕು ಅನ್ನೋರಿಗೆ ಅವಕಾಶಗಳು ಬೆಟ್ಟದಷ್ಟಿವೆ. ಆದ್ರೇ, ಸಿಕ್ಕಿರೋ ಅವಕಾಶಗಳನ್ನ ಸರಿಯಾಗಿ ಸದುಪಯೋಗಪಡಿಸಿಕೊಂಡ್ರೇ, ಸಾಧನೆ ಅಸಾಧ್ಯವೇನೂ ಅಲ್ಲ. ಒಂದಿಷ್ಟು ಪೋಷಕರು, ಸ್ನೇಹಿತರ ಪ್ರೋತ್ಸಾಹ ಸಿಕ್ಬಿಟ್ರೇ ಆಕಾಶವೇ ಕೈಗೆಟಿಕಿಬಿಡುತ್ತೆ. ಹುಬ್ಬಳ್ಳಿಯ ಸುಂದರಿಯೊಬ್ಬಳು ಈಗ ಸಿಕ್ರೇ ಅವಕಾಶ ಬಳಸಿಕೊಂಡು ಸೌಂದರ್ಯ ಸ್ಪರ್ಧೆಯಲ್ಲಿ ಅಚೀವ್ ಮಾಡ್ತಿದಾಳೆ.
ದಂತಪಕ್ತಿ ಹೊಳೆಯೋ ಮುತ್ತುಗಳನ್ನ ಪೋಣಿಸಿದಂತಿವೆ.  ಹಾಗೇ ಒಂದ್ಸಾರಿ ನಗು ಬಿಸಾಕಿದ್ರೇ ಎದುರಿಗಿದ್ದವರು ಕ್ಲೀನ್ ಬೋಲ್ಡ್. ಸೌಂದರ್ಯವತಿಯ ಎದುರು ಸವಾಲು ಹಾಕೋರುಂಟೆ.. ಚೆಲುವಿಗೇ ರಾಣಿಯಂತಿರೋ ಈಕೆಯ ತಲೆಮೇಲೆ ವಜ್ರದಂತಾ ಕಿರೀಟ ಸೊಬಗು ಇಮ್ಮಡಿಗೊಳಿಸಿದೆ.  ಬಳುಕಿದ್ರೇ ಬಳ್ಳಿ.. ನಡೆದ್ರೇ ಹಂಸ. ಈ ಹೊಗಳಿಕೆ ಜಾಸ್ತಿ ಅನಿಸ್ತಿದೆ ಅಲ್ವಾ. ಇದಕ್ಕೆ ಕಾರಣ ಹುಬ್ಬಳ್ಳಿಯ ಈ ಸುಂದ್ರೀ ಈಗ ಮಿಸ್ ಭಾರತ್ ಅರ್ಥ್..  ಗೋಕುಲ ರೋಡ್ ನಿವಾಸಿ ನರಸಿಂಹ ಕೊಳ್ವೇಕರ್ ಮತ್ತು ಮಂಗಳಾ ದಂಪತಿಯ ಪುತ್ರಿ ಪ್ರಿಯಾಂಕ ಏಳು ವರ್ಷದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದಾರೆ. ನವದೆಹಲಿಯ ಪ್ರತಿಷ್ಠಿತ ಅಮನ್ ಗಾಂಧಿ ಫಿಲ್ಮ್ ಪ್ರೊಡಕ್ಷನ್ ಸಂಸ್ಥೆಯು ಆಗಸ್ಟ್ 30ರಂದು ಆಯೋಜಿಸಿದ್ದ ಮಿಸ್ ಭಾರತ್ ಅರ್ಥ್ 2018 ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದಕ್ಷಿಣ ಭಾರತದ ಏಕೈಕ ಯುವತಿ. ರನ್ನರ್ ಅಪ್ ಆಗುವ ಮೂಲಕ ಪ್ರಸಿದ್ಧಿಗಳಿಸಿದಾಳೆ ಈ ಬ್ಯೂಟಿ. 2012ರಲ್ಲಿ ಮಿಸ್ ಮಂಗಳೂರು, 2016ರಲ್ಲಿ ಸೌತ್ ಇಂಡಿಯಾ ಬ್ಯೂಟಿಫುಲ್ ಸ್ಮೈಲ್, 2015ರಲ್ಲಿ  ಮಿಸ್ ಇಂಡಿಯಾ ಅಡ್ವೆಂಚರ್ ಟೈಟಲ್ ಗಳನ್ನ ಮುಡಿಗೇರಿಸಿಕೊಂಡಿದಾಳೆ. 
ಕೆಎಲ್ ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್ ಹಾಗೂ ಐಬಿಎಂಆರ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದಾರೆ. ಗೋಕುಲ್ ರಸ್ತೆಯ ಮೊರಾರ್ಜಿ ನಗರದಲ್ಲಿ ಬ್ರೈನ್ ಚಕ್ಕರ್ ಎಂಬ ಸಂಸ್ಥೆ ಆರಂಭಿಸಿ, ಉದ್ಯೋಗ ಆಕಾಂಕ್ಷಿಗಳಿಗೆ ಕೋಚಿಂಗ್ ನೀಡ್ತಿದಾರೆ. ಅರಳು ಹುರಿದಂತೆ ಪಟಪಟನೆ ಮಾತು, ಸದಾ ನಗುಮೊಗದ ಚೆಲುವೆ ಪ್ರಿಯಾಂಕ ಅತ್ಯುತ್ತಮ ನೃತ್ಯ ಸಂಯೋಜಕಿ. ಬಾಲ್ಯದಿಂದಲೇ ನೃತ್ಯ, ಸಂಗೀತದಲ್ಲಿ ಆಸಕ್ತಿ. ಹಲವು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಗಮನ ಸೆಳೆದಿದಾಳೆ. ಕನ್ನಡ, ಮರಾಠಿ, ಪಂಜಾಬಿ, ತೆಲುಗು, ತಮಿಳು, ಹಿಂದಿ ಹಾಗೂ  ಇಂಗ್ಲೀಷ್ ಭಾಷೆಗಳ ಪರಿಣೆಯಾದ ಈಕೆ ಅದ್ಭುತ ಜಾಣೆ. ಮಿಸ್ ಭಾರತ್ ಅರ್ಥ್ ರನ್ನರ್ ಅಪ್ ಆದ ಬಳಿಕ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಆಫರ್ ಬಂದಿವೆ. ಆದ್ರೇ, ಕತೆ ಇಷ್ಟವಾಗಲಿಲ್ಲ ಅನ್ನೋ ಕಾರಣಕ್ಕೆ ಅದಕ್ಕೆ ಒಪ್ಪಿಕೊಂಡಿಲ್ವಂತೆ ಪ್ರಿಯಾಂಕ. ಆದ್ರೇ, ಅಮಿತಾಬ್ ಬಚ್ಚನ್, ಅಕ್ಷಯಕುಮಾರ್, ಪುನೀತ್ ರಾಜಕುಮಾರ್ ಜತೆ ನಟಿಸ್ಬೇಕೆಂಬ ಆಸೆಯೂ ಈಕೆಗಿದೆ. ಪ್ರಾಣಿಗಳಂದ್ರಂತೂ ಪ್ರಾಣಬಿಡ್ತಾಳೆ. ಕೇಂದ್ರ ಸಚಿವೆ ಮೇನಕಾ ಗಾಂಧಿ ಪೀಪಲ್ ಅನಿಮಲ್ ಎನ್ ಜಿಒಗ ಸಕ್ರಿಯ ಕಾರ್ಯಕರ್ತೆಯೂ ಹೌದು. 
ಹುಬ್ಬಳ್ಳಿಯಲ್ಲಿ ಅಪಾಯಕ್ಕೆ ಸಿಲುಕಿದ 200ಕ್ಕೂ ಹೆಚ್ಚು ಹಸು, ಕರು, ನಾಯಿ ಮತ್ತಿತರ ಜಾನುವಾರುಗಳನ್ನ ಸಂರಕ್ಷಣೆ ಮಾಡಿ ಮಾನವೀಯತೆ ಮೆರೆದಿದಾಳೆ. ಕೋಟಿಗಟ್ಟಲೇ ಗಳಿಸ್ಬೇಕೆಂಬ ಆಕಾಂಕ್ಷಿಯೇನೂ ಇಲ್ಲ. ಆದ್ರೇ, ಬಡವರಿಗೆ, ನೊಂದವರು, ಮಹಿಳೆಯರು ಹಾಗೂ ಪ್ರಾಣಿಗಳಿಗಾಗಿ ಒಂದಿಷ್ಟು ಕೆಲಸ ಮಾಡ್ಬೇಕೆಂಬ ಹಸಿವು ಇದೆಯಂತೆ. ವನ್ಯಜೀವಿಗಳಧಾಮವೊಂದನ್ನ ಕಟ್ಬೇಕೆಂಬ ಕನಸು ಕೂಡ ಈಕೆಗಿದೆಯಂತೆ. ಪ್ರಕೃತಿ ಬಗೆಗಿ ಜಾಗೃತಿ ಕೂಡ ಪ್ರಿಯಾಂಕ ಮೂಡಿಸ್ತಿದಾಳೆ. 
ಮಗಳ ಆಕಾಂಕ್ಷೆಗಳಿಗೆ ಪೋಷಕರು ಮೊದಲಿನಿಂದಲೂ ಸಪೋರ್ಟ್ ಮಾಡ್ತಿದಾರೆ. ಹಾಗಾಗಿಯೇ ಇಷ್ಟೊಂದು ಅಚೀವ್ ಮಾಡೋಕೆ ಸಾಧ್ಯವಾಗಿದೆ ಅನ್ನೋದನ್ನ ಪ್ರಿಯಾಂತ ಮರೆತಿಲ್ಲ. ಇನ್ನೂ ಸಾಧಿಸ್ಬೇಕೆಂಬ ತುಡಿತವಿರುವ ಈ ಸುಂದರಿಯ ಎಲ್ಲ ಕನಸು ಈಡೇರಲಿ.
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *