Breaking News

ತಾನೇ ತಪ್ಪು ಮಾಡಿ, ಮೀಡಿಯಾದವರ ಮೇಲೇ ಎಗರಾಡಿದ ನಟ ದರ್ಶನ್- ಕಾನೂನು ಮುರಿದಿದ್ರೂ ಅದನ್ನೇ ಪಾಠ ಮಾಡ್ತಾವ್ರೇ ದರ್ಶನ್

ಆಂಕರ್: ಕಳೆದ ಆರು ದಿನಗಳಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ನಟ ದರ್ಶನ್ ಈವತ್ತು ಡಿಸ್ಚಾರ್ಜ್ ಆಗಿದ್ರು. ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿದ್ದಂತೆ ಫುಲ್ ಚಾರ್ಜ್ ಆಗಿದ್ರು. ಮಾಧ್ಯಮಗಳಿಗೆ ಕಾನೂನು ಪಾಠ ಮಾಡಿ ಹೊರಟ ಅವರ ನಡೆ ಹೇಗಿತ್ತು? ಏನೆಲ್ಲಾ ಮಾಡಿದ್ರು ಗೊತ್ತಾ? ಈ ರಿಪೋರ್ಟ್ ನೋಡಿ.
ಹೇಳಿದ್ದು ಶಾಸ್ತ್ರ ತಿಂದದ್ದು ಬದನೆಕಾಯಿ
ಕಾನೂನು ಪಾಠ ಮಾಡಿದ ದರ್ಶನ್ ಒನ್ ವೇ ಅಲ್ಲೆ ನುಗ್ಗಿದ್ರು
ತೊಡೆ ಮೇಲೆ ನಾಲ್ಕು ಜನ ಹೆಣ್ಮಕ್ಕಳನ್ನ ಕೂರಿಸಿಕೊಂಡಿದ್ರಂತೆ
ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ದರ್ಶನ್, ನಾನು ಆರೋಗ್ಯವಾಗಿದ್ದೇನೆ ಅಂತ ಅಭಿಮಾನಿಗಳತ್ತ ಕೈ ಬೀಸಿದ್ರೆ. ಇತ್ತ ಅಪಘಾತ ಪ್ರಕರಣ ಸಂಬಂಧ ಎದ್ದಿದ್ದ ಗೊಂದಲಗಳಿಗೆ ಸ್ವತಃ ತಾವೇ ಸ್ಪಷ್ಟನೆ ನೀಡಿದ್ರು. 
ಆಸ್ಪತ್ರೆಯಿಂದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಸ್ಚಾರ್ಜ್.. ನಾನು ಆರೋಗ್ಯವಾಗಿದ್ದೇನೆ, ಫಿಟ್ನೆಸ್ ಕೂಡ ಚೆನ್ನಾಗಿದೆ…
ಅಪಘಾತದ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತೆ…? ಮೈಸೂರಿನಲ್ಲಿ ಕಾರು ಅಪಘಾತದಿಂದ ಗಾಯಗೊಂಡು ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಕಳೆದ 6 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ತಮ್ಮ ನೆಚ್ಚಿನ ನಟ ಯಶಸ್ವಿ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಹೊರ ಬರ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ವ್ಯಕ್ತಪಡಿಸಿದ್ರು. ಅಭಿಮಾನಿಗಳತ್ತ ದರ್ಶನ್ ಕೈ ಬೀಸುತ್ತಿದ್ದಂತೆ ಡಿ ಬಾಸ್ ಎಂಬ ಘೋಷಣೆ ಕೂಗಿ, ಸಂಭ್ರಮಿಸಿದ್ರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟ ದರ್ಶನ್, ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ಊಟ ಮಾಡಿಕೊಂಡು ಬರುವಾಗ ಅಪಘಾತ ಸಂಭವಿಸಿತ್ತು. ನನ್ನ ಕಾರಿನಲ್ಲಿ ಐದು ಮಂದಿ ಮಾತ್ರ ಕೂರಲು ಅವಕಾಶವಿದೆ. ನಾವು ಐದು ಮಂದಿ ಮಾತ್ರ ಕಾರಿನಲ್ಲಿದ್ದವು. ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಅಪಘಾತ ಸ್ಥಳ ನೋಡಿದರೇ  ಗೊತ್ತಾಗುತ್ತೆ. ನನ್ನ ಕಾರು ಡಿಕ್ಕಿಯಿಂದ ಕಂಬ ಬಿದ್ದಿಲ್ಲ. ಮೊದಲೇ ಕಂಬ ಬಿದ್ದಿತ್ತು. ಈಗ ನಾನು ಆರಾಮವಾಗಿದ್ದೇನೆ ಎಂದು ಹೇಳೋ ಮೂಲಕ ಪ್ರಕರಣ ಸಂಬಂಧ ಎದ್ದಿದ್ದ ಪ್ರಶ್ನೆಗೆ ಸಮಜಾಯಿಷಿ ನೀಡಿದ್ರು.  ನಟ ದರ್ಶನ್ ಅವರ ಬಲಗೈ ಮೂಳೆ ಮುರಿದಿರೋ ಪರಿಣಾಮ ರಾಡ್ ಅಳವಡಿಸಲಾಗಿದೆ. ಹೀಗಾಗಿ ಅವರಿಗೆ ಹಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ವೈದ್ಯರ ಸಲಹೆಯಂತೆ ಮುಂದಿನ ಚಿಕಿತ್ಸೆ ದೃಷ್ಟಿಯಿಂದ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಮೈಸೂರಿನ ಸಿದ್ಧಾರ್ಥ ಲೇ ಔಟ್ ನಲ್ಲಿರುವ ತಮ್ಮ ಹಳೇ ಮನೆಯಲ್ಲೇ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.  ಇನ್ನು ದರ್ಶನ್ ಫಿಟ್ನೆಸ್ ಬಗ್ಗೆ ಎದ್ದಿದ್ದ ಗೊಂದಲಕ್ಕೆ  ದರ್ಶನ್ . ಕ್ಯಾಮೆರಾಗಳಿಗೆ ತಮ್ಮ ಎಡಗೈ ಬೈಸಿಪ್ ಎತ್ತಿ ತೋರಿಸೋ ಮೂಲಕ ತಾನು ಇನ್ನೂ ಫಿಟ್ ಅನ್ನೋದನ್ನ ತೋರಿಸಿದ್ರು. ಜೊತೆಗೆ ಎರಡು ಮೂರು ತಿಂಗಳ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳೊ ವಿಶ್ವಾಸ ವ್ಯಕ್ತಪಡಿಸಿದ್ರು
ವಾಯ್ಸ್: ಇದರ ಜೊತೆಗೆ ಮಾಧ್ಯಮಗಳನ್ನ ಕಾಮಿಡಿ ಚಾನೆಲ್ ಎಂದು ಜರಿದ್ರು. ಪ್ರಶ್ನೆ ಕೇಳಲು ಮುಂದಾದ ಮಾಧ್ಯಮಗಳಿಗೆ ವಾರ್ನ್ ಕೊಡುವ ರೀತಿ ಉದ್ಧಟತನ ತೋರಿದ್ರು. ಇದರ ನಡುವೆ ಕಾನೂನಿನ ಪಾಠ ಹೇಳಿ ಒನ್ ವೇ ಅಲ್ಲಿಯೇ ಹೋದ್ರು
ವಾಯ್ಸ್: ಒಟ್ಟಾರೆ, ನಟ ದರ್ಶನ್ ಅವರು ಇಷ್ಟರ ಮಟ್ಟಿಗೆ ಬದಲಾಗಿದ್ದು ಮಾತ್ರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಎಲ್ಲ ಘಟನೆಗಳಿಂದ ದರ್ಶನ್ ತಮ್ಮ ಅಭಿಮಾನಿಗಳಿಗೆ ಅದ್ಯಾವ ಸಂದೇಶ ನೀಡಿದ್ರು? ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಮಾತ್ರ ಅವರ ವಿವೇಚನೆಗೆ ಬಿಡಲಾಗಿದೆ.
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *