Breaking News

ಕಣಿವೆ ರಾಜ್ಯದಲ್ಲಿ ಬರೋಬ್ಬರಿ 13 ವರ್ಷಗಳ ಬಳಿಕ ಸ್ಥಳೀಯ ಚುನಾವಣೆ…

ಶ್ರೀನಗರ: ಬರೋಬ್ಬರಿ 13 ವರ್ಷಗಳ ಬಳಿಕ ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಇಂದು ಮೊದಲ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ರಾಜ್ಯದ 422 ಕಡೆ 1100 ಮುನ್ಸಿಪಾಲಿಟಿ ವಾರ್ಡ್​ಗಳಿಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್​ ಕಾನ್ಫರೆನ್ಸ್​​ ಹಾಗೂ ಮುಫ್ತಿ ಅವರ ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್​​​ ಪಾರ್ಟಿ)ಗೆ ಮಹತ್ವದ್ದಾಗಿದೆ. ನಾಲ್ಕು ಹಂತದಲ್ಲಿ ನಡೆಯುವ ಚುನಾವಣೆಯಲ್ಲಿ ಒಟ್ಟು 2990 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈಗಾಗಲೇ ಇದರಲ್ಲಿ 240 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಶ್ಮೀರದ ಏಳು ಮುನ್ಸಿಪಾಲ್ಟಿಗಳು ನಮ್ಮ ಹಿಡಿತದಲ್ಲಿವೆ. ಪಕ್ಷದ 75 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ಚುನಾವಣೆಗಳು ಅಕ್ಟೋಬರ್​​ 16ಕ್ಕೆ ಮುಗಿಯಲಿವೆ. ಮತದಾನ ಬೆಳಗ್ಗೆ 7 ರಿಂದ 4 ಗಂಟೆಯವರೆಗೂ ನಡೆಯುತ್ತದೆ. ಕೊನೆಯ ಬಾರಿ 2005 ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಹಿಂದಿನ ಚುನಾವಣೆಯಲ್ಲಿ ನ್ಯಾಷನಲ್​ ಕಾನ್ಫರೆನ್ಸ್ ಹಿಡಿತ ಸಾಧಿಸಿತ್ತು.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *