Breaking News

ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ: ಓರ್ವ ಉಗ್ರ ಸಾವು..

ಜಮ್ಮು ಮತ್ತು ಕಾಶ್ಮೀರ: ಉಗ್ರರು ವಿರುದ್ಧ ನಡೆದ ಎನ್​ಕೌಂಟರ್​ನಲ್ಲಿ ಭಾರತೀಯ ಸೇನೆ ಮತ್ತೊಬ್ಬ ಉಗ್ರನನ್ನ ಹೊಡೆದುರುಳಿಸಿದೆ. ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಿನ್ನೆ ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಭಾರತೀಯ ಸೇನೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನೊಬ್ಬನನ್ನ ಹೊಡೆದುರುಳಿಸಿದೆ.
ದಕ್ಷಿಣ ಕಾಶ್ಮೀರದ ಬಾಗ್ಬುಂದ್ ಪ್ರದೇಶದಲ್ಲಿ ನಿನ್ನೆ ಸೇನೆ ಸರ್ಚ್ ಆಪರೇಷನ್ ನಡೆಸುತ್ತಿತ್ತು. ಈ ವೇಳೆ ಅಡಗಿದ್ದ ಉಗ್ರರು ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಸೇನಾ ಪಡೆ ಕೂಡ ಅಟ್ಯಾಕ್ ಮಾಡಿದ್ದು ಒಬ್ಬ ಉಗ್ರನನ್ನ ಸದೆಬಡಿದಿದೆ. ಮೃತ ಉಗ್ರನನ್ನ ಹಿಜ್ಬುಲ್ ಸಂಘಟನೆಯ ಸಾಬಿರ್ ಅಹ್ಮದ್ ದಾರ್ ಅಂತ ಗುರುತಿಸಲಾಗಿದ್ದು, ಘಟನಾ ಸ್ಥಳದಲ್ಲಿ ಹಲವು ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ. ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಉಗ್ರನಿಗೆ ಗಾಯಗಳಾಗಿದ್ದು, ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ಗಾಯಾಳು ಉಗ್ರನ ಬಗ್ಗೆ ಯಾವುದೆ ಮಾಹಿತಿ ಲಭ್ಯವಾಗಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *