ದೆಹಲಿ: ಮೀಟೂ ಅಭಿಯಾನ ಶುರುವಾದಾಗಿನಿಂದ ಹಲವು ಗಣ್ಯರ ಕಾಮದಾಟದ ಬಗ್ಗೆ ಆರೋಪಗಳು ಕೇಳಿ ಬರ್ತಾನೆ ಇವೆ. ಇದ್ರಲ್ಲಿ ಬಾಲಿವುಡ್ನ ಹಿಟ್ ನಿರ್ದೇಶಕ ಸಾಜಿದ್ ಖಾನ್ ಕೂಡ ಇದ್ದಾರೆ. ಈಗಾಗಲೇ ಸಾಜಿದ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಇದೀಗ ಮತ್ತೊಂದು ಆರೋಪ ಅವರ ವಿರುದ್ಧ ಕೇಳಿ ಬಂದಿದೆ.
ನಟಿ ಮಂದನಾ ಕರಿಮಿ ತಮಗೂ ಸಾಜಿದ್ ಖಾನ್ರಿಂದ ಇಂಥ ಪರಿಸ್ಥಿತಿ ಎದುರಾಗಿತ್ತು ಅಂತ ಆರೋಪ ಮಾಡಿದ್ದಾರೆ. 2014ರಲ್ಲಿ ಹಮ್ಶಕಲ್ಸ್ ಸಿನಿಮಾದಲ್ಲಿ ಚಾನ್ಸ್ ಕೇಳಲು ಹೋದಾಗ, ಸಾಜಿದ್ ನನಗೆ ಬಟ್ಟೆ ಬಿಚ್ಚುವಂತೆ ಹೇಳಿದ್ದರು ಅಂತ ಮಂದನಾ ಆರೋಪಿಸಿದ್ದಾರೆ. ಪಾತ್ರದ ಬಗ್ಗೆ ಮಾತನಾಡುವಾಗ ನಿನ್ನನ್ನು ಬಟ್ಟೆ ಇಲ್ಲದೆ ನೋಡಲು ನನಗೆ ಆಸೆಯಾಗಿದೆ. ನೀನು ನನಗೆ ಸಹಕರಿಸಿದರೆ ಸಿನಿಮಾದಲ್ಲಿ ಉತ್ತಮ ಪಾತ್ರ ಕೊಡುತ್ತೇನೆ ಅಂತ ಸಾಜಿದ್ ಹೇಳಿದ್ದರಂತೆ.
ಕೇವಲ ಸಾಜಿದ್ ಅಷ್ಟೇ ಅಲ್ಲ, ಮತ್ತೊಬ್ಬ ನಿರ್ದೇಶಕ ಉಮೇಶ್ ಗಡ್ಗೆ ಕೂಡ ತಮಗೆ ಇದೇ ರೀತಿ ಕಿರುಕುಳ ನೀಡಿದ್ರು ಅಂತ ಮಂದನಾ ಆರೋಪಿಸಿದ್ದಾರೆ. ಕ್ಯಾ ಕೂಲ್ ಹೇ ಹಮ್ ಚಿತ್ರದ ನಿರ್ದೇಶಕ ಉಮೇಶ್ ಗಡ್ಗೆ ನನಗೆ ಡೇಟಿಂಗ್ಗೆ ಬಾ ಅಂತ ಕರೆದಿದ್ರು. ಡೇಟಿಂಗ್ಗೆ ಹೋದಾಗ, ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಅಂತ ಮಂದನಾ ಕರಿಮಿ ಆರೋಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





