ಭುವನೇಶ್ವರ್: ಭಾರತದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಒಡಿಶಾದಲ್ಲಿ ಪೆಟ್ರೋಲ್ಗಿಂತ ಡೀಸೆಲ್ ಬೆಲೆ ದುಬಾರಿಯಾಗಿದೆ. ಸಾಮಾನ್ಯವಾಗಿ ಕಡಿಮೆ ತೆರಿಗೆಯ ಕಾರಣ ಪೆಟ್ರೋಲ್ ಬೆಲೆಗಿಂತ ಡೀಸೆಲ್ ಬೆಲೆ ಕಡಿಮೆ ಇರುತ್ತದೆ. ಆದ್ರೆ ಭಾನುವಾರದಂದು ಭುವನೇಶ್ವರದಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ಗಿಂತ 12 ಪೈಸೆ ಹೆಚ್ಚಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹80.57 ಇದ್ದರೆ, ಡೀಸೆಲ್ ಬೆಲೆ ₹80.69 ಆಗಿದೆ.ಒಡಿಶಾದಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನ ಮೀರಿಸಿರುವುದು ಇದೇ ಮೊದಲು ಎಂದು ಉತ್ಕಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಜೆನರಲ್ ಸೆಕ್ರೆಟರಿ ಸಂಜಯ್ ಲತ್ ಹೇಳಿದ್ದಾರೆ. ಬೇರೆ ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ಗೆ ಬೇರೆ ಬೇರೆ ವ್ಯಾಟ್ ಇದೆ. ಆದರೆ ಒಡಿಶಾದಲ್ಲಿ ಪೆಟ್ರೋಲ್, ಡೀಸೆಲ್ ಎರಡಕ್ಕೂ 26% ವ್ಯಾಟ್ ಇದೆ ಎಂದು ಅವರು ಹೇಳಿದ್ದಾರೆ. ಇನ್ನು ಡೀಸೆಲ್ ಬೆಲೆ ಹೆಚ್ಚಾಗಿರೋದ್ರಿಂದ ಡೀಸೆಲ್ ಮಾರಾಟ ಕೂಡ ತಗ್ಗಿದೆ ಎಂದು ಅವರು ಹೇಳಿದ್ದಾರೆ.ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ದೋಷಪೂರಿತ ನೀತಿಗಳೇ ಕಾರಣ ಎಂದು ಒಡಿಶಾ ಹಣಕಾಸು ಸಚಿವ ಎಸ್ಬಿ ಬೆಹೆರಾ ಆರೋಪಿಸಿದ್ದಾರೆ. ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





