ನವದೆಹಲಿ: ಶಬರಿಮಲೈ ಅಯ್ಯಪ್ಪಸ್ವಾಮಿ ದರ್ಶನ ಪಡೆಯುವ ವಿಚಾರವಾಗಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಹೊರಹಾಕಿದೆ. ಸುಪ್ರೀಂಕೋರ್ಟ್ ಆದೇಶದಂತೆ ಅಯ್ಯಪ್ಪಸ್ವಾಮಿ ದೇವಾಲಯವೂ ಮಹಿಳೆಯರಿಗೆ ದರ್ಶನ ನೀಡಲು ಬಾಗಿಲು ತೆರೆದಿದೆ. ಆದರೆ, ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮಹಿಳಾ ಭಕ್ತರು ಶಬರಿಮಲೆಗೆ ಆಗಮಿಸಿಸುತ್ತಿದ್ದಾರೆ. ಆದರೆ, ಮಹಿಳಾ ಭಕ್ತರು ದೇವಸ್ಥಾನ ಪ್ರವೇಶಿಸದಂತೆ ಪ್ರತಿಭಟನಾಕಾರರು ತಡೆಯುತ್ತಿದ್ದಾರೆ.ಇಂದು ಕೂಡ ಆಂಧ್ರಪ್ರದೇಶ ಮೂಲದ ವಾಸಂತಿ (41) ಮತ್ತು ಆಧಿಶೇಷಿ (42) ಇಬ್ಬರು ಮಹಿಳೆಯರು ಪಂಬಾ ಕ್ಯಾಂಪ್ನಿಂದ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಹೊರಟ್ಟಿದ್ದರು. ಕ್ಯಾಂಪ್ನಿಂದ 100-200 ಮೀಟರ್ ದೂರ ಸಾಗಿದ್ದರು. ದರ್ಶನ ಪಡೆಯಲು ಹೊರಟಿದ್ದ ಮಹಿಳೆಯರು 50 ವರ್ಷದೊಳಗಿನವರು ಎಂದು ಪ್ರತಿಭಟನಾಕಾರರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಮಹಿಳೆಯರನ್ನು ಪೊಲೀಸ್ ಸಿಬ್ಬಂದಿ ರೂಮ್ಗೆ ವಾಪಸ್ಸು ಕಳುಹಿಸಲಾಗಿದೆ. ಬಳಿಕ ಗಾಯಗೊಂಡ ಮಹಿಳೆಯರನ್ನು ಪಂಬಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಇಬ್ಬರು ಮಹಿಳೆಯರು ಕೇರಳದ ವಿವಿಧ ದೇವಸ್ಥಾನಗಳನ್ನು ಭೇಟಿ ಮಾಡಿ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಬಂದಿದ್ದರು. ಆದರೆ, ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ವಾಸ್ತವದ ಪರಿಸ್ಥಿತಿಯನ್ನು ಅರಿತು ಮಧ್ಯದಲ್ಲೇ ಪೊಲೀಸರಿಗೆ ತಿಳಿಸಿ ಹಿಂದಕ್ಕೆ ಬಂದಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





