ಚಿಕ್ಕಬಳ್ಳಾಪುರದಲ್ಲಿ ಪೋಷಕರ ವಿರೋಧ ನಡುವೆಯೂ ಹಿಂದೂ ಯುವಕನನ್ನು ಮುಸ್ಲಿಂ ಯುವತಿ ಒಬ್ಬಳು ವರಿಸಿರುವ ಘಟನೆ ವರದಿಯಾಗಿದೆ.ಹೌದು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದ ಅನ್ಯ ಧರ್ಮದ ಯುವತಿಯನ್ನು ನಜ್ಮಾ ಎಂದು ತಿಳಿದುಬಂದಿದೆ. ಪೋಷಕರ ವಿರೋಧದ ನಡುವೆಯೂ ಹರೀಶ್ ಬಾಬು ಜೊತೆಗೆ ನಜ್ಮಾ ವಿವಾಹವಾಗಿದ್ದಾಳೆ. ಚಿಕ್ಕಬಳ್ಳಾಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೇಮಾಂಕರವಾಗಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇಶ್ವರ ಗ್ರಾಮದ ನಜ್ಮಾ, ಚಿಕ್ಕಬಳ್ಳಾಪುರ ತಾಲೂಕಿನ ಯಾಪಲ ಹಳ್ಳಿಯ ಹರೀಶ್ ಬಾಬು ಜೊತೆಗೆ ಪ್ರೇಮ ವಿವಾಹವಾಗಿದ್ದಾಳೆ. ದೇಗುಲದಲ್ಲಿ ವಿವಾಹವಾಗಿ ಚಿಕ್ಕಬಳ್ಳಾಪುರದ ಎಸ್ಪಿ ಕಚೇರಿಗೆ ಇಬ್ಬರು ಬಂದಿದ್ದಾರೆ. ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ಹಿನ್ನೆಲೆ, ಎಸ್ ಪಿ ಭೇಟಿಯಾಗಿ ರಕ್ಷಣೆ ನೀಡುವಂತೆ ಹರೀಶ್ ಬಾಬು ಮತ್ತು ನಜ್ಮಾ ದಂಪತಿ ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

