Breaking News

ನಾಲ್ವರು ಯೋಧರು ಹುತಾತ್ಮ, 7 ನಾಗರೀಕರ ಸಾವು..!

ಶ್ರೀನಗರ್​: ಜಮ್ಮು ಕಾಶ್ಮೀರಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಹೊಡೆದು ಹಾಕಿದ್ದು, 4 ಜನ ಯೋಧರು ಹುತಾತ್ಮರಾಗಿದ್ದಾರೆ. ಜೊತೆಗೆ 7 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಅಕ್ರಮವಾಗಿ ಗಡಿ ನುಸುಳಿದ ಉಗ್ರರು ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ನುಸುಳುಕೋರರನ್ನು ಸೇನೆ ಹೊಡೆದು ಹಾಕಿದ್ದು, ಗುಂಡಿನ ಕಾಳಗದಲ್ಲಿ 4 ಜನ ಯೋಧರು ಹುತಾತ್ಮರಾಗಿದ್ದಾರೆ. ಇನ್ನು ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಲಾರೂ ಬಳಿಯೂ ಎನ್​ಕೌಂಟರ್ ನಡೆದಿದೆ. ಎನ್​ಕೌಂಟರ್ ನಡೆಯುತ್ತಿರುವ ಜಾಗಕ್ಕೆ ತೆರಳಬೇಡಿ ಅಂತ ಸೇನೆ ಸೂಚನೆ ನೀಡಿದ್ರೂ ಅತ್ತ ತೆರಳಿದ ನಾಗರೀಕರಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ. ಉಳಿದಂತೆ 40 ಜನರು ಗಾಯಗೊಂಡಿದ್ದಾರೆ ಅಂತ ಜಮ್ಮು ಕಾಶ್ಮೀರದ ಅಡಿಶನಲ್ ಡಿಜಿಪಿ ಮುನಿರ್ ಅಹ್ಮದ್ ಖಾನ್ ಮಾಹಿತಿ ನೀಡಿದ್ದಾರೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *