Breaking News

ಹೆಚ್‌ಡಿಕೆ ಖಡಕ್‌ ನಿರ್ಧಾರ: ರಾಜ್ಯದಲ್ಲಿ ಇನ್ಮುಂದೆ ಕನ್ನಡ ಕಡತಗಳಿಗಷ್ಟೇ ಸಹಿ

ಬೆಂಗಳೂರು: ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನ ಕುರಿತು ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ, ನವೆಂಬರ್ 1 ರಿಂದ ಸರ್ಕಾರದ ಎಲ್ಲಾ ಕಡತಗಳಲ್ಲಿ ‘ಕನ್ನಡ ಬಳಕೆ ಕಡ್ಡಾಯ’ಕ್ಕೆ ಆದೇಶ ಹೊರಡಿಸಿದೆ.ನವೆಂಬರ್ 1ರ ಬಳಿಕ ರಾಜ್ಯ ಸರ್ಕಾರದ ಕಡತಗಳಲ್ಲಿ ಕನ್ನಡ ಅನುಸರಿಸದಿದ್ದರೆ ಅಂತಹ ಕಡತಗಳನ್ನು ಪರಿಶೀಲಿಸಲಾಗುವುದಿಲ್ಲ ಎಂದು ಖಡಕ್ ಸೂಚನೆ ನೀಡಲಾಗಿದೆ. ಕನ್ನಡ ರಾಜ್ಯೋತ್ಸವ ದಿನದಿಂದಲೇ ರಾಜ್ಯಸರ್ಕಾರದ ಕಡತಗಳು ಹಾಗೂ ಅಂತರ ರಾಜ್ಯ ವಿಷಯಗಳಿಗೆ ಸಂಬಂಧಿಸಿದ ಎಲ್ಲ ಆಡಳಿತಾತ್ಮಕ ಕಡತಗಳು, ಕೇಂದ್ರ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕಡತಗಳಲ್ಲೂ ಕನ್ನಡ ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಸೂಚನೆ ಹೊರಡಿಸಿದ್ದಾರೆ.ಆಡಳಿತದಲ್ಲಿ ಕನ್ನಡ ಬಳಕೆ ಕಡ್ಡಾಯ’ಕ್ಕೆ ಹೊರಡಿಸುತ್ತಿರುವ ಸರಣಿ ಆದೇಶ, ಸುತ್ತೋಲೆಗಳಿಗೆ ವಿಶೇಷವಾಗಿ ಐಎಎಸ್‌ ಅಧಿಕಾರಿಗಳ ಮಟ್ಟದಲ್ಲಿ ಕಿಮ್ಮತ್ತು ಸಿಗದ ಹಿನ್ನೆಲೆಯಲ್ಲಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ದಿಟ್ಟ ತೀರ್ಮಾನವನ್ನು ಕೈಗೊಂಡಿದ್ದಾರೆ.ಇಂಗ್ಲೀಷ್ ಮಿಡಿಯಂ ಶಾಲೆಗಳಲ್ಲೂ ಕನ್ನಡ ಕಡ್ಡಾಯಮಾಡಿ ಸಿಎಂ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಹೀಗಿರುವಾಗ ಈಗ ಮತ್ತೊಂದು ಸುತ್ತೋಲೆಯನ್ನು ಮುಖ್ಯಮಂತ್ರಿಗಳ ಕಛೇರಿ ಹೊರಡಿಸಲಿದೆಯೇ ಎಂಬುದು ಗೊತ್ತಿಲ್ಲ. ಸೇವೆಗೆ ಸೇರಿದ ಆರಂಭದಲ್ಲೇ ಎಸಿ, ಜಿಲ್ಲಾ ಪಂಚಾಯಿತಿ ಸಿಇಒಗಳಾಗಿ ನೇಮಕಗೊಳ್ಳುವ ಈ ಅಧಿಕಾರಿಗಳು ಗ್ರಾಮೀಣ ಭಾಗದ ಜನಸಾಮಾನ್ಯರ ಕಷ್ಟಗಳಿಗೂ ಸ್ಪಂದಿಸುವ ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಕನ್ನಡ ಭಾಷಾ ಬಳಕೆಯ ಅನಿವಾರ್ಯತೆ ಸೃಷ್ಟಿಸುವುದು ಸಿಎಂ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *