Breaking News

ಆನೇಕಲ್ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ್ ಅವಿರೋಧ ಆಯ್ಕೆ

ಆನೇಕಲ್: ಆನೇಕಲ್ ನ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಮರು ಆಯ್ಕೆ ಮಾಡಿಲಾಗಿದ್ದು ನೂತನ ಅಧ್ಯಕ್ಷರಾಗಿ ಬಿ.ಟಿವಿ ವರದಿಗಾರರಾದ ಅಮರೇಶ್ ಅವಿರೋಧವಾಗಿ ಆಯ್ಕೆಯಾದರು, ಬೆಂಗಳೂರು ಹೊರವಲಯ ಆನೇಕಲ್ನ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಮರು ಆಯ್ಕೆ ನಡೆದಿದ್ದು 27 ಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ ಬಿ.ಟಿವಿ ವರದಿಗಾರ ಅಮರೇಶ್ ಅವರನ್ನು ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು,ಇನ್ನು ಪ್ರಮುಖವಾಗಿ ಸಭೆಯಲ್ಲಿ ಪ್ರತಿನಿತ್ಯ ಹಗಲು ರಾತ್ರಿ ಎನ್ನದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕೆಲಸ ಮಾಡುವಂತಹ ಪತ್ರಕರ್ತರಿಗೆ ಈ ದಿನಗಳಲ್ಲಿ ಸರಿಯಾದ ಸೂಕ್ತ ಭದ್ರತೆ ಇಲ್ಲದಂತಾಗಿದೆ ಮೊದಲು ಎಲ್ಲಾ ಪತ್ರಕರ್ತರಿಗೂ ಅವರ ಆರೋಗ್ಯದ ದೃಷ್ಟಿಯಿಂದ ಹಾಗು ಕುಟುಂಬದವರ ಆರೋಗ್ಯದ‌ ದೃಷ್ಟಿಯಿಂದ ಮೊದಲು ಅವರಿಗೆ ಆರೋಗ್ಯ ಕಾರ್ಡ್ ಒದಗಿಸಬೇಕು ನಂತರ ಮುಂದಿನ ದಿನಗಳಲ್ಲಿ ಎಲ್ಲಾ ವಿಷಯಗಳ ಬಗ್ಗೆ ಸಭೆಯಲ್ಲಿ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ಮುಂದಿನ ನಡೆ ಬಗ್ಗೆ ಹೆಜ್ಜೆ ಇಟ್ಟು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತಾಗಬೇಕೆಂದು ನೂತನ ಅಧ್ಯಕ್ಷ ಅಮರೇಶ್ ಹಾಗು ಸಭೆಯ ಎಲ್ಲಾ ಸದಸ್ಯರು ತಿಳಿಸಿದ್ದಾರೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *