Breaking News

ಸಿದ್ದರಾಮಯ್ಯಂಗೆ ಜನರ ಚಿಂತೆ, ಯಡಿಯೂರಪ್ಪಂಗೆ ಶೋಭಾ ಚಿಂತೆ-ಸಿ.ಎಂ ಇಬ್ರಾಹಿಂ..

ಬಾಗಲಕೋಟೆ: 2019 ರಲ್ಲಿ ಮೋದಿ‌ ಮತ್ತೆ ಬರೋದಿಲ್ಲ. ತಿಂಗಳಿಗೆ ಒಂದು ಸಾರಿ‌ ಮನ್ ಕಿ ಬಾತ್ ಅಂತಾನ. ಮನ್ ಕಿಬಾತ್ ಹುಡುಗ ಹುಡುಗಿ ‌ಮಾತಾಡಬೇಕು. ಅಲಾ ಇವನ, ಜನ್ ಕಿ ಬಾತ್ ಮಾತಾಡು ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ‌ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಜಮಖಂಡಿ ಮತಕ್ಷೇತ್ರದ ಕಡಪಟ್ಟಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಇಬ್ರಾಹಿಂ, ಮೋದಿ‌ ನಿಮಗೆ ಪ್ರಜ್ಞಾ ಇದೆಯಾ. ಆಡಳಿತ ನಡೆಸೋದು ಗೊತ್ತಿದೆಯಾ? ನವಾಜ್ ಷರೀಫ್​​ ಕರೆದಿದ್ರಾ, ಕರೆಯದೇ ಇದ್ರು ಹೋದಿ. ಸರ್ವಜ್ಞ ಹೇಳಿದಾ, ಕರೆಯದೆ ಬರುವವನ, ಬರಿಗಾಲಲ್ಲಿ ನಡೆಯುವವನ, ಕರೆದು ಕೆರವಿಲೆ ಹೊಡಿ ಅಂತ ಎಂದು ವಚನ ಹೇಳಿದರು. ಚಕೋರಂಗೆ ಚಂದ್ರಮನ ಚಿಂತೆ, ಅಂಬುಜಕೆ ಬಾನುವಿನ ಚಿಂತೆ, ಮಾಜಿ ಸಿಎಂ ಸಿದ್ದರಾಮಯ್ಯಗೆ ಜನರ ಚಿಂತೆ, ಆದರೆ ಯಡಿಯೂರಪ್ಪಗೆ ಕೇವಲ ಶೋಭಾ ಚಿಂತೆ ಎಂದು ವ್ಯಂಗ್ಯವಾಡಿದರು.

Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *