ಡೈರಕ್ಟೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್ನ ಇಂದು ದೇಶದ ಐದು ಮಹಾನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಅಧಿಕಾರಿಗಳು ಬೆಂಗಳೂರು ಸೇರಿದಂತೆ ಚೆನೈ, ನವದೆಹಲಿ, ಮಧುರೈ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ದಾಳಿ ನಡೆಸಿದ್ರು. ಕಳೆದ 48 ಗಂಟೆಯ ಸತತ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬರೋಬ್ಬರಿ ನೂರು ಕೆ.ಜಿ ಚಿನ್ನದ ಬಿಸ್ಕೆಟ್ಸ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕಸ್ಟಮ್ಸ್ ಌಕ್ಟ್ನಡಿಯಲ್ಲಿ ಈ ಸಂಬಂಧ ಐವರನ್ನ ಬಂಧಿಸಲಾಗಿದೆ. ಇವರೆಲ್ಲಾ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಚಿನ್ನ ಸರಬರಾಜು ಮಾಡುತ್ತಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಕ್ಕೆ ಭಾರಿ ಬೇಡಿಕೆ ಹಿನ್ನೆಲೆ, ಚೀನಾ, ಭೂತಾನ್, ಮಯನ್ಮಾರ್,ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





