Breaking News

ಪಾನ್​ಕಾರ್ಡ್ ಮಾಹಿತಿ ಕೊಡದ ಶಾಸಕರು, ಸಂಸದರು ಎಷ್ಟು ಮಂದಿ ಗೊತ್ತಾ?

ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಸಲ್ಲಿಸುವ ಅಫಿಡವಿಟ್​ನಲ್ಲಿ ದೇಶದ 7 ಜನ ಸಂಸದರು ಹಾಗೂ 199 ಜನ ಶಾಸಕರು ಪಾನ್​ಕಾರ್ಡ್ ವಿವರಗಳನ್ನ ನೀಡಿಲ್ಲ ಅಂತಾ ಎಡಿಆರ್​​ ಸಂಸ್ಥೆ ಮಾಹಿತಿ ಬಿಡುಗಡೆ ಮಾಡಿದೆ. ಈ ಮಾಹಿತಿ ಪ್ರಕಾರ ಪಾನ್​ಕಾರ್ಡ್​​ ವಿವರ ಸಲ್ಲಿಸದೇ ಇರುವ ರಾಜಕಾರಣಿಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಇರುವುದು ಕಾಂಗ್ರೆಸ್​ ಪಕ್ಷದವರು.ಅಸೋಸಿಯೇಶನ್ ಫಾರ್​​ ಡೆಮಾಕ್ರೆಟಿಕ್​​​ ರಿಫಾರ್ಮ್ಸ್​​ ಮತ್ತು ನ್ಯಾಷನಲ್​ ಎಲೆಕ್ಷನ್​ ವಾಚ್​ ಸಂಸ್ಥೆಗಳು ನಡೆಸಿದ್ದ ಸಮೀಕ್ಷೆಯಿಂದ ಈ ಬಗ್ಗೆ ತಿಳಿದುಬಂದಿದೆ. 542 ಸಂಸದರು ಹಾಗೂ 4086 ಶಾಸಕರು ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿದ್ದ ದಾಖಲೆಗಳಲ್ಲಿ 7 ಜನ ಸಂಸದರು ಹಾಗೂ 199 ಶಾಸಕರು ಪಾನ್​ಕಾರ್ಡ್​ ವಿವರವನ್ನು ನೀಡಿಲ್ಲ. ಇನ್ನು ಕಾಂಗ್ರೆಸ್​ ಪಕ್ಷದ 51 ಶಾಸಕರು, ಬಿಜೆಪಿಯ 42 ಶಾಸಕರು ಮತ್ತು ಸಿಪಿಐಎಂನ 25 ಶಾಸಕರು ಈವರೆಗೂ ಪಾನ್​ಕಾರ್ಡ್​ ಮಾಹಿತಿ ನೀಡಿಲ್ಲ. ಅಲ್ಲದೇ 40 ವಿಧಾನಸಭಾ ಕ್ಷೇತ್ರದ ಮಿಜೋರಾಂ ರಾಜ್ಯದಲ್ಲಿ 28 ಶಾಸಕರು ಪಾನ್​ಕಾರ್ಡ್​ ಮಾಹಿತಿ ನೀಡಿಲ್ಲ. ಇತ್ತ ಜೆಡಿಯು ಹಾಗೂ ಎಐಎಡಿಎಂಕೆ ಪಕ್ಷದ ತಲಾ ಇಬ್ಬರು ಸಂಸದರು, ಕಾಂಗ್ರೆಸ್​, ಎನ್​ಸಿಪಿ ಮತ್ತು ಎಐಎಫ್​ನ ಒಬ್ಬೊಬ್ಬ ಸಂಸದರು ಪಾನ್​ ಕಾರ್ಡ್​ ಮಾಹಿತಿ ನೀಡಿಲ್ಲವಂತೆ. ​ ​

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *