ಬೆಂಗಳೂರು: ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆಂಬಿಡೆಂಟ್ ಮಾರ್ಕೆಟಿಂಗ್ ಮನಿ ಎಕ್ಸ್‌ಚೇಂಜ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅರೆಸ್ಟ್ ಆಗುವ ಸಾಧ್ಯತೆ ಇದೆ.ಪ್ರಕರಣ ಸಂಬಂಧ ತನಿಖೆ ನಡೆಸ್ತಿರುವ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ಟೀಂ, ಜನಾರ್ದನ್ ರೆಡ್ಡಿಯನ್ನ ಅರೆಸ್ಟ್ ಮಾಡಲಿದ್ದಾರೆ ಎನ್ನಲಾಗಿದೆ. ಜನಾರ್ದನ ರೆಡ್ಡಿ ವಿರುದ್ಧ ನೋಟ್ ಬ್ಯಾನ್ ಸಂದರ್ಭದಲ್ಲಿ ಬ್ಲಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿರುವ ಆರೋಪ ಇದೆ. ತಮ್ಮ ಆಪ್ತ ಆಲಿಖಾನ್ ಜೊತೆ ಸೇರಿ ವಹಿವಾಟು ನಡೆಸಿರುವ ಆರೋಪ ಜನಾರ್ದನ್ ರೆಡ್ಡಿ ಮೇಲೆ ಇದೆ.ಸಿಸಿಬಿ ಪೊಲೀಸರು ಬಂಧಿಸಲಿದ್ದಾರೆ ಅನ್ನೋ ಮಾಹಿತಿ ಸಿಕ್ಕ ಕೂಡಲೇ ಜನಾರ್ದನ ರೆಡ್ಡಿ ತಮ್ಮ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ ಅಂತಾ ಹೇಳಲಾಗ್ತಿದೆ. ಈ ಸಂಬಂಧ ಸಿಸಿಬಿ ಪೊಲೀಸರು ರೆಡ್ಡಿಗಾಗಿ ಬಲೆ ಬೀಸಿದ್ದಾರೆ.ಏನಿದು ವಂಚನೆ ಪ್ರಕರಣ..?ನೋಟ್ ಬ್ಯಾನ್ ವೇಳೆ ಬಹುಕೋಟಿ ರೂಪಾಯಿ ವಹಿವಾಟು ಮಾಡಿರುವ ಆರೋಪ ಜನಾರ್ದನ ರೆಡ್ಡಿ ಮೇಲಿದೆ. ಆಪ್ತ ಸಹಾಯಕ ಆಲಿಖಾನ್ ಮೂಲಕ ಬ್ಯಾನ್ ಆಗಿದ್ದ ನೋಟುಗಳನ್ನ ಬದಲಾವಣೆ ಮಾಡಿರುವ ಆರೋಪವಿದು. ಆಂಬಿಡೆಂಟ್ ಗ್ರೂಪ್ ಮೂಲಕ ಅಕ್ರಮ ಹಣ ಬದಲಾವಣೆ ಮಾಡಿಕೊಂಡಿರುವ ಆರೋಪ ಮಾಜಿ ಸಚಿವ ಜನಾರ್ದನ ರೆಡ್ಡಿಯ ಮೇಲಿದೆ. 2017ರಲ್ಲಿ ಆಂಬಿಡೆಂಟ್ ಗ್ರೂಪ್ ವಿರುದ್ಧ ವಂಚನೆ ಆರೋಪ ಪ್ರಕರಣ ದಾಖಲಾಗಿತ್ತು. ಡಿ.ಜೆ.ಹಳ್ಳಿ, ಬಾಣಸವಾಡಿ, ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಆಂಬಿಡೆಂಟ್ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣಗಳನ್ನ ಸಿಸಿಬಿಗೆ ವರ್ಗಾಯಿಸಲಾಗಿತ್ತು. ಇನ್ನು, ಆಲಿಖಾನ್ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧನವಾಗಿದ್ದ. ಓಬಳಪುರಂ ಮೈನಿಂಗ್ ಅಕ್ರಮ ಗಣಿಗಾರಿಕೆಯಲ್ಲಿ 7ನೇ ಆರೋಪಿಯಾಗಿದ್ದ.
bigtvnews | Hubli Dharwad News | Kannada News | Karnataka News Hubli News | News In Hubli | Local news





