Breaking News

ಫುಟ್ಬಾತ್ ನಲ್ಲಿ ವ್ಯಾಪಾರ ವಹಿವಾಟ: ಡಿಸಿಪಿ ರವೀಶ್ ಭೇಟಿ ನೀಡಿ ಎಚ್ಚರಿಕೆ

ಹುಬ್ಬಳ್ಳಿ : ನೀಲಿಜನ್‌ ರಸ್ತೆಯಲ್ಲಿನ ಹಾರ್ಡ್ ವೇರ್ ಶಾಪ್,ಟ್ರಾನ್ಫೋರ್ಟ್ ಶಾಪ್ ಗಳು ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆ ನಡೆಸುವ ಅಂಗಡಿಕಾರರು ಸಾರ್ವಜನಿಕರಿಗೆ ಓಡಾಡಲು ಇರುವ ಫುಟ್ಬಾತ್ ಗಳನ್ನು ಆಕ್ರಮಸಿಕೊಂಡು, ಆ ಜಾಗದಲ್ಲಿ ತಮ್ಮ ಸಾಮಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಹೀಗಾಗಿ ಇಲ್ಲಿ ಓಡಾಡುವ ಪಾದಾಚಾರಿಗಳಿಗೆ ತೀರಾ ತೊಂದರೆ ಆಗುತ್ತಿದ್ದು, ಡಿಸಿಪಿ ರವೀಶ್ ಭೇಟಿ ನೀಡಿದರು.

ಈ ನಿಟ್ಟಿನಲ್ಲಿ ಪಾದಚಾರಿಗಳ ಸಮಸ್ಯೆ ಕಂಡ ಅಪರಾಧ ಹಾಗೂ ಸಂಚಾರಿ ವಿಭಾಗದ ಡಿಸಿಪಿ ರವೀಶ ಖುದ್ದು ನೀಲಿಜನ್‌ ರಸ್ತೆಯಲ್ಲಿ ಸಂಚಾರಿ ಮಾಡಿ,ಫುಟ್ಬಾತ್ ಗಳನ್ನು ಆಕ್ರಮಿಸಿದ ಅಂಗಡಿ ಸವಾರರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಿದ್ದಾರೆ.ಮತ್ತೆ ಇದೆ ರೀತಿಯಾದ ಫುಟ್ಬಾತ್ ಒತ್ತುವರಿಯಾದ್ರೆ ಅಂಗಡಿ ಮಾಲಕರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುಲಾಗುತ್ತದೆ ಎಂದು ಡಿಸಿಪಿ ರವೀಶ್ ಎಚ್ಚರಿಕೆ ನೀಡಿದ್ದಾರೆ.

Share News

About Shaikh BigTv

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *