ನವದೆಹಲಿ: ತೆಲಂಗಾಣದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮಹಾಮೈತ್ರಿ ರಚನೆಯಾಗಿದೆ. ಡಿಸೆಂಬರ್ 7 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್, ಟಿಡಿಪಿ, ತೆಲಂಗಾಣ ಜನ ಸಮಿತಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮೈತ್ರಿ ಮಾಡಿಕೊಂಡಿದ್ದು, ವಿಧಾನಸಭಾ ಸೀಟುಗಳನ್ನು ಹಂಚಿಕೆ ಮಾಡಿಕೊಂಡಿವೆ. ಈ ಬಗ್ಗೆ ದೆಹಲಿಯಲ್ಲಿ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಆರ್.ಸಿ. ಖುಂಟಿಯಾ ಅಧಿಕೃತವಾಗಿ ಘೋಷಿಸಿದ್ದಾರೆ. ತೆಲಂಗಾಣ ವಿಧಾನಸಭೆ 119 ಸದಸ್ಯರನ್ನು ಹೊಂದಿದ್ದು ಅವುಗಳಲ್ಲಿ 94 ಕ್ಷೇತ್ರಗಳು ಕಾಂಗ್ರೆಸ್, 14 ತೆಲುಗು ದೇಶಂ ಪಾರ್ಟಿ(ಟಿಡಿಪಿ), 8 ತೆಲಂಗಾಣ ಜನ ಸಮಿತಿ, ಮೂರು ಕ್ಷೇತ್ರಗಳು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ(ಸಿಪಿಐ)ಗೆ ಹಂಚಿಕೆಯಾಗಿವೆ. ಇನ್ನು ಕಾಂಗ್ರೆಸ್ 94 ಕ್ಷೇತ್ರಗಳಲ್ಲಿ 1 ಕ್ಷೇತ್ರವನ್ನು ತೆಲಂಗಾಣ ಇಂಟಿ ಪಾರ್ಟಿ ಅಧ್ಯಕ್ಷ ಚೆರುಕು ಸುಧಾಕರ್‌ಗೆ ಬಿಟ್ಟುಕೊಡಲಿದೆ. ಆದ್ರೆ, ಸುಧಾಕರ್ ಪಕ್ಷಕ್ಕೆ ಅಧಿಕೃತ ಚಿಹ್ನೆ ಸಿಗದೇ ಇದ್ದುದರಿಂದ ಕಾಂಗ್ರೆಸ್ ಹಸ್ತದ ಚಿಹ್ನೆ ಮೂಲಕವೇ ಕಣಕ್ಕಿಳಿಯಲಿದ್ದಾರೆ. ಇನ್ನು ಕಾಂಗ್ರೆಸ್‌ನ 74 ಅಭ್ಯರ್ಥಿಗಳ ಲಿಸ್ಟ್ ಫೈನಲ್ ಆಗಿದ್ದು, ಇದೇ ಶನಿವಾರ ಬಿಡುಗಡೆ ಮಾಡಲಿದ್ದೇವೆ ಅಂತಾ ಖುಂಟಿಯಾ ಹೇಳಿದ್ದಾರೆ. ಇನ್ನುಳಿದ 20 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಆದಷ್ಟು ಬೇಗ ಅದನ್ನು ಫೈನಲ್ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಟಿಡಿಪಿ ಮುಖ್ಯಸ್ಥ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಮಗೆ ಲಭಿಸಿರುವ ಸ್ಥಾನಕ್ಕೆ ತಕರಾರು ತೆಗೆಯದೇ ಒಪ್ಪಿಕೊಂಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





