Breaking News

ಪಂಚ ರಾಜ್ಯ ಚುನಾವಣಾ ಪೂರ್ವ ಸಮೀಕ್ಷೆ ಮಾಡುವಂತಿಲ್ಲ‘..

ನವದೆಹಲಿ: ಮುಂಬರುವ ಪಂಚರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ಚುನಾವಣಾ ಆಯೋಗ ಡೇಟ್ ಫಿಕ್ಸ್‌ ಮಾಡಿದೆ. ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ, ಮತ್ತು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ನವೆಂಬರ್ 12 ರಿಂದ ಡಿಸೆಂಬರ್ 7ರವರೆಗೆ ಚುನಾವಣಾ ಪೂರ್ವ ಸಮೀಕ್ಷೆಗಳನ್ನ ನಡೆಸದಂತೆ ಭಾರತೀಯ ಚುನಾವಣಾ ಆಯೋಗ ನಿಷೇಧ ಹೇರಿದೆ. ಸೆಕ್ಷನ್ 126(1)(ಬಿ) ಜನಪ್ರತಿನಿಧಿ ಕಾಯ್ದೆ 1951ರಂತೆ ಚುನಾವಣೆಗೆ ಸಂಬಂಧಿಸಿದಂತೆೆ ಫಲಿತಾಂಶ, ಜನಾಭಿಪ್ರಾಯ ಸಮೀಕ್ಷೆ, ಚುನಾವಣಾ ಸರ್ವೆ ಮಾಡುವುದು ಅಪರಾಧ ಅಂತಾ ಚುನಾವಣಾ ಆಯೋಗ ಹೇಳಿದೆ. ಇದು ಎಲ್ಲಾ ರಾಜ್ಯಗಳ ಚುನಾವಣೆ ಮುಗಿದ 48 ಗಂಟೆಗಳ ಅವಧಿವರೆಗೂ ಈ ಆಜ್ಞೆ ಜಾರಿಯಲ್ಲಿರುತ್ತೆ ಎಂದಿದೆ ಚುನಾವಣಾ ಆಯೋಗ. ದೃಶ್ಯ ಮಾಧ್ಯಮ ಸೇರಿದಂತೆ ಇನ್ನಿತರ ಮಾಧ್ಯಮಗಳಿಗೂ ಇದು ಅನ್ವಯ ಆಗಲಿದೆ ಅಂತಾನೂ ಹೇಳಿದೆ. ಪಂಚರಾಜ್ಯಗಳಲ್ಲಿ ಮೊದಲು ಛತ್ತೀಸ್‌ಗಢದಲ್ಲಿ ನವೆಂಬರ್ 12 ಮತ್ತು ನವೆಂಬರ್ 20 ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ನವೆಂಬರ್ 28ಕ್ಕೆ ಮತದಾನ ನಡೆಯಲಿದೆ. ಇನ್ನು ತೆಲಂಗಾಣದಲ್ಲಿ ಡಿಸೆಂಬರ್ 7ಕ್ಕೆ ಚುನಾವಣೆ ನಡೆಯಲಿದೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *