ಉತ್ತರ ಪ್ರದೇಶ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿರುವ ನಗರಗಳ ಹೆಸರು ಮರುನಾಮಕರಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಯೋಗಿ ಆದಿತ್ಯನಾಥ್ ಮುಸ್ಲಿಂ ಹೆಸರಿರುವ ನಗರಗಳ ಮರುನಾಮಕರಣ ಮಾಡುತ್ತಿದ್ದಾರೆ ಅಂತಾ ಸುಹುಲ್‌ದೇವ್ ಭಾರತೀಯ ಸಮಾಜ ಪಾರ್ಟಿ ಮುಖ್ಯಸ್ಥ ರಾಜ್‌ಭಾರ್ ಕಿಡಿಕಾರಿದ್ದಾರೆ. ಯೋಗಿ ಆದಿತ್ಯನಾಥ್ ಮುಸ್ಲಿಂ ನಗರಗಳ ಹೆಸರನ್ನು ಹೇಗೆ ಬದಲಾಯಿಸುತ್ತಿದ್ದಾರೋ ಹಾಗೆಯೇ ಬಿಜೆಪಿಯೊಳಗೆ ಇರುವಂತಹ ಮುಸ್ಲಿಂ ಸಚಿವರು, ಶಾಸಕರು, ನಾಯಕರ ಹೆಸರನ್ನು ಬದಲಾಯಿಸಿ ಅಂತಾ ರಾಜ್‌ಭಾರ್ ಸವಾಲ್ ಹಾಕಿದ್ದಾರೆ. ಬಿಜೆಪಿ ವಕ್ತಾರರಾದ ಶಾನ್ವಾಜ್ ಹುಸೇನ್, ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವೀ, ಉತ್ತರ ಪ್ರದೇಶ ಸಚಿವ ಮೊಹ್ಸಿನ್ ರಾಜಾ ಇವರು ಮೂವರು ಮುಸ್ಲಿಂ ಆಗಿದ್ದು, ಅವರ ಹೆಸರನ್ನು ಮೊದಲು ಬದಲಾಯಿಸಿ ಅಂತಾ ಹರಿಹಾಯ್ದಿದ್ದಾರೆ. ಇದು ಯೋಗಿ ಆದಿತ್ಯನಾಥ್ ರಾಜ್ಯದ ಜನತೆಯ ಗಮನವನ್ನು ತಮ್ಮಕಡೆ, ತಮ್ಮ ಪಕ್ಷದ ಕಡೆ ಸೆಳೆಯಲು ಈ ರೀತಿಯ ಗೀಳಗೆ ಕೈ ಹಾಕಿದ್ದಾರೆ. ಈಗ ಅವರಿಗೆ ನಗರಗಳ ಮರು ನಾಮಕರಣದ ಅಮಲು ನೆತ್ತಿಗೇರಿದೆ ಅಂತಾ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





