ಬೆಂಗಳೂರು: 14 ದಿನಗಳ ನ್ಯಾಯಾಂಗ ಬಂಧನದ ಮೇಲೆ ಇಂದು ಸಂಜೆ 4.50 ನಿಮಿಷಕ್ಕೆ ಸರಿಯಾಗಿ ಪರಪ್ಪನ ಅಗ್ರಹಾರ ಜೈಲಿಗೆ ಎಂಟ್ರಿ ಕೊಟ್ಟ ಜನಾರ್ದನ ರೆಡ್ಡಿಗೆ ವಿಚಾರಣಾಧೀನ ಸಂಖ್ಯೆ ದೊರೆತಿದೆ. ತಕ್ಷಣವೇ, ಜೈಲಿನ ಪ್ರೊಸಿಜರ್ ಮುಗಿಸಿದ ಅಧಿಕಾರಿಗಳು ರೆಡ್ಡಿಗೆ ವಿಚಾರಣಾಧೀನ ಕೈದಿಯಾಗಿ 10902 ಸಂಖ್ಯೆಯನ್ನು ಕೊಟ್ಟಿದ್ದಾರೆ.ಆ್ಯಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಂಧಿಸಿದ್ದರು. ಇಂದು ರೆಡ್ಡಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಬಳಿಕ ಅವರನ್ನು 1ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿರತು. ವಿಚಾರಣೆ ನಡೆಸಿದ ಜಡ್ಜ್ ಜಗದೀಶ್ ಅವರು ರೆಡ್ಡಿ ಪರ ವಕೀಲರ ವಾದಗಳನ್ನು ತಿರಸ್ಕರಿಸಿದರು. ಸಿಸಿಬಿ ಪೊಲೀಸರ ಸಾಕ್ಷ್ಯಗಳೇ ಬಲವಾಗಿದ್ದ ಕಾರಣ ರೆಡ್ಡಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಬಿಟ್ಟು ಬಂದರು. ಪರಪ್ಪನ ಅಗ್ರಹಾರದಲ್ಲಿ ರೆಡ್ಡಿಗೆ ಕ್ವಾರೆಂಟೈನ್ ಕೊಠಡಿ ನೀಡಲಾಗಿದೆ. ಜೊತೆಗೆ ರೆಡ್ಡಿಗೆ ವಿಚಾರಣಾಧೀನ ಸಂಖ್ಯೆಯನ್ನೂ ನೀಡಲಾಗಿದೆ. ಸದ್ಯ ರೆಡ್ಡಿಗೆ 10902 ಸಂಖ್ಯೆ ನೀಡಲಾಗಿದೆ.ರೆಡ್ಡಿ ಜೈಲು ಸೇರಲು ಕಾರಣವಾದ ಸೆಕ್ಷನ್ಗಳು:ಸದ್ಯ ಜನಾರ್ದನ ರೆಡ್ಡಿ ಮೇಲೆ ಈ ಮೊದಲು prevention of chit fund and money circulation (banning) act sec 4, 5, 6 ಅನ್ವಯ ಎಫ್ಐಆರ್ ಆಗಿತ್ತು. ಬಳಿಕ ರೆಡ್ಡಿ ಮೇಲೆ 420, 468, 120(b), 201 IPC ಸೆಕ್ಷನ್ಗಳ ಮೇಲೆ ದೂರು ದಾಖಲಾಗಿದೆ. 420- ವಂಚನೆ, 468- ಬೇಕಂತಲೇ ವಂಚನೆ, 120(b)- ಅಪರಾಧ ಚಟುವಟಿಕೆಯಲ್ಲಿ ಭಾಗಿ, 201-ಅಧಿಕಾರಿಗಳ ಮುಂದೆ ಸುಳ್ಳು ಹೇಳಿಕೆ, ತನಿಖಾಧಿಕಾರಿಗೆ ಸಹಕರಿಸದ ಆರೋಪಿ (ಜಾಮೀನು ರಹಿತ) ಎಂದು ಪರಿಗಣಿಸಿ ದೂರು ದಾಖಲಾಗಿದೆ. ಅಲ್ಲದೇ, ಇಷ್ಟೂ ಸೆಕ್ಷನ್ಸ್ ಗಳ ದೂರುಗಳ ಅನ್ವಯವೇ ಸಿಸಿಬಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಸಾಕ್ಷ್ಯ ಸಮೇತ ರೆಡ್ಡಿಯನ್ನು ಹಾಜರು ಪಡಿಸಿದ್ದಾರೆ. ಈ ಹಿನ್ನೆಲೆ, ರೆಡ್ಡಿ ಪರ ವಕೀಲರ ಆಬ್ಜೆಕ್ಷನ್ಗಳನ್ನು ರಿಜೆಕ್ಟ್ ಮಾಡಿರುವ ನಾಯಾಧೀಶರು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.ಸದ್ಯ ಆ್ಯಂಬಿಡೆಂಟ್ ಪ್ರಕರಣದಲ್ಲಿ ಈ ಮೊದಲು 3 ಜನ ಆರೋಪಿಗಳಿದ್ರು. ಆದ್ರೆ ಈಗ ಪ್ರಕರಣದಲ್ಲಿ 6 ಮಂದಿಯನ್ನು ಆರೋಪಿ ಎಂದು ಪರಿಗಣಿಸಲಾಗಿದೆ. 6ನೇ ಆರೋಪಿಯಾಗಿ ಜನಾರ್ದನ ರೆಡ್ಡಿ ಪ್ರಕರಣ ಎದುರಿಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





