Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಕೆಲಸ ನೀಡುವುದಾಗಿ ಮಹಿಳೆ ಅಪಹರಣ, 2 ಲಕ್ಷಕ್ಕೆ ಮಾರಾಟ, ನಿರಂತರ 24 ದಿನ ಅತ್ಯಾಚಾರ!

ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಈ ಕೃತ್ಯವೆಸಗಲಾಗಿದ್ದು, ಅಪಹರಣಕಾರರು ಆಕೆಯನ್ನು 2 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಬಳಿಕ ಆಕೆಯನ್ನು ಕೊಂಡವರು ನಿರಂತರ 24 ದಿನಗಳ ಕಾಲ ನಿರಂತರ ಅತ್ಯಾಚಾರ ವೆಸಗಿದ್ದಾರೆ. ಪ್ರಸ್ತುತ ಪೊಲೀಸರು ಆಕೆಯನ್ನು ರಕ್ಷಿಸಿದ್ದು, ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ.ಏನಿದು ಘಟನೆ?30 ವರ್ಷದ ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಸಂತ್ರಸ್ತೆಗೆ ಅಕ್ಟೋಬರ್ 28 ರಂದು ಅಪರಿಚಿತರೊಬ್ಬರು ಕರೆ ಮಾಡಿ ತಾವು ಸುಭಾಷ್ ಯಾದವ್ ಎಂದು ಹೇಳಿಕೊಂಡಿದ್ದಾರೆ. ಬಳಿಕ ತಿಂಗಳಿಗೆ 15 ಸಾವಿರ ವೇತನ ಸಿಗುವ ಕೆಲಸ ಕೊಡಿಸುವುದಾಗಿ ಹೇಳಿ ಭೇಟಿಯಾಗುವಂತೆ ತಿಳಿಸಿದ್ದಾರೆ. ಸಂತ್ರಸ್ತೆ ಕೆಲಸ ಸಿಗುತ್ತದೆಂದು ಭೋಪಾಲ್ ನ ಡಿಐಜಿ ಬಂಗಲೆ ಪ್ರದೇಶದಲ್ಲಿ ಅವರನ್ನು ಭೇಟಿಯಾಗಲು ಹೋಗಿದ್ದಾರೆ. ಅಲ್ಲಿ ವ್ಯಕ್ತಿಯೊಬ್ಬ ಆಕೆಯನ್ನು ಅಪಹರಿಸಿ ಇಂದೋರ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಎರಡು ದಿನಗಳ ಕಾಲ ಉಳಿಸಿಕೊಂಡು ಅಲ್ಲಿಂದ ಅಕ್ಟೋಬರ್ 31ರಂದು ಆಕೆಯನ್ನು ಅಲ್ವಾರ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ 2 ಲಕ್ಷ ರೂ.ಗೆ ರೋಹಿತಾಶ್ ಮತ್ತು ಭೋಲರಾಂ ಎಂಬವರಿಗೆ ಮಾರಾಟ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಯುವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.ಮಹಿಳೆ ನೀಡಿರುವ ಹೇಳಿಕೆ ಅನ್ವಯ ತನ್ನನ್ನು ಮಾರಾಟ ಮಾಡಿದ ಹಣವನ್ನು ರೋಹಿತ್ ಮತ್ತು ಸುಭಾಷ್ ಹಂಚಿಕೊಂಡಿದ್ದಾರೆ. ಬಳಿಕ ನನ್ನನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಭೋಲಾರಂ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ದಿನಕ್ಕೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಮಹಿಳೆ ಹೇಳಿದ್ದಾರೆ. ಇತ್ತ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ನವೆಂಬರ್ 11 ರಂದು ಕುಟುಂಬವರು ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಆದರೆ ಸಂತ್ರಸ್ತೆ ಫೋನ್ ಸ್ವಿಚ್ ಆಫ್ ಆಗಿದೆ. ಬಳಿಕ 2-3 ನಿಮಿಷ ಫೋನ್ ಆನ್ ಆಗಿದೆ. ಈ ವೇಳೆ ಪೋಲಿಸರು ನಂಬರ್ ಟ್ರ್ಯಾಕ್ ಮಾಡಿದ್ದು, ಬಳಿಕ ಸಂತ್ರಸ್ತೆ ಇದ್ದ ಸ್ಥಳ ಗೊತ್ತಾಗಿದೆ.ಕೂಡಲೇ ಪೊಲೀಸರು ಹೋಗಿ ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಅಲ್ವಾರ್ ನಿವಾಸಿಗಳಾದ ರೋಹಿತ್ ಮತ್ತು ಭೋಲರಾಂ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಅವರಿಗಾಗಿ ಬಲೆ ಬೀಸಿದ್ದಾರೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *