ಚೆನ್ನೈ: ಒಬ್ಬ ಸ್ಟಾರ್ ಅಂದ್ರೆ ಅವ್ರಿಗೆ ನೂರಾರು ಜನ ಅಭಿಮಾನಿಗಳು ಇರ್ತಾರೆ. ಅವರು ಏನೇ ಮಾಡಿದ್ರೂ ಅದನ್ನೇ ಫಾಲೋ ಮಾಡೋವಷ್ಟು ಹುಚ್ಚು ಅಭಿಮಾನಿಗಳು ಕೂಡ ಇರ್ತಾರೆ. ಹಾಗಾಗಿ ಒಬ್ಬ ನಟ ಅಥವಾ ನಟಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಆದ್ರೆ ಕೆಲವು ಸೆಲೆಬ್ರಿಟಿಗಳು ಜನರಿಗೆ ಮಾದರಿಯಾಗೋ ಬದಲು ತಾವೇ ತಪ್ಪು ಮಾಡುತ್ತಿರುತ್ತಾರೆ. ಅದಕ್ಕೆ ತಾಜಾ ಎಕ್ಸಾಂಪಲ್ ಅಂದ್ರೆ ತಮಿಳುನಾಡಿನ ನಟಿ ಗಾಯತ್ರಿ ರಘುರಾಂ.ವೀಕೆಂಡ್ ಮಸ್ತಿಯಲ್ಲಿದ್ದ ಈ ನಟಿ ಎಂಆರ್ಸಿ ನಗರದಲ್ಲಿರುವ ಸ್ಟಾರ್ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ರು. ಆದ್ರೆ ಪಾರ್ಟಿ ಮುಗಿಸಿ ವಾಪಾಸ್ ಆಗುವಾಗ ಪೊಲೀಸರು ಸತ್ಯ ಸ್ಟುಡಿಯೋ ಬಳಿಯ ಟ್ರಾಫಿಕ್ ಚೆಕ್ಪಾಯಿಂಟ್ನಲ್ಲಿ ನಟಿಯ ಕಾರನ್ನು ತಡೆದಿದ್ದಾರೆ. ಆಗ ಆಕೆ ಕುಡಿದು ಡ್ರೈವಿಂಗ್ ಮಾಡ್ತಿರೋದನ್ನ ಪೊಲೀಸರು ಗಮನಿಸಿದ್ದಾರೆ. ಇನ್ನೊಂದೆಡೆ ನಟಿಯ ಕಾರು ನೋಡುತ್ತಿದ್ದಂತೆ ಸಾಕಷ್ಟು ಜನ ಸ್ಥಳದಲ್ಲಿ ಜಮಾಯಿಸಿದ್ದಾರೆ. ಜೊತೆಗೆ ನಟಿಯ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡೋಕೆ ಪ್ರಯತ್ನಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಆಕೆಯನ್ನ ಕಾರಿನಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಆದ್ರೆ ಜಮಾಯಿಸಿರುವ ಜನರನ್ನ ನೋಡಿದ ನಟಿ ಪೊಲೀಸರ ಬಳಿ ಮನೆಯವರೆಗೂ ಡ್ರಾಪ್ ಮಾಡಿ ನಂತರ ಕಾರ್ ಸೀಜ್ ಮಾಡುವಂತೆ ಮನವಿ ಮಾಡಿದ್ದಾರೆ. ನಂತರ ಓರ್ವ ಕಾನ್ಸಟೇಬಲ್ ಆಕೆಯನ್ನ ಮನೆಗೆ ಕಾರಿನಲ್ಲಿ ಡ್ರಾಪ್ ಮಾಡಿ ನಂತರ ಕಾರನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.ಸದ್ಯ ಕುಡಿದು ವಾಹನ ಚಲಾಯಿಸುತ್ತಿದ್ದ ಗಾಯತ್ರಿ ರಘುರಾಂ ವಿರುದ್ಧ ಸೆಕ್ಷನ್ 185 ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್ಗೆ ದಂಡ ಕಟ್ಟಿ ನಟಿ ಗಾಯತ್ರಿ ತನ್ನ ಕಾರ್ ಬಿಡಿಸಿಕೊಳ್ಳಬೇಕಾಗಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





