Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಗಾಂಜಾ ಮಾರಾಟ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ…

ಮಂಗಳೂರು, ಜನವರಿ 14: ಮಂಗಳೂರು ನಗರದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ನೀಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಎಕಾನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.ಮಲೆನಾಡಿನಲ್ಲೂ ಗಾಂಜಾ ವಾಸನೆ: ಸಾರ್ವಜನಿಕರಲ್ಲಿ ಆತಂಕಖಚಿತ ಮಾಹಿತಿ ಮೇರೆಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 8 ಮಂದಿ ಯುವಕರನ್ನು ಗಾಂಜಾ ಸಮೇತ ಬಂಧಿಸಿದ್ದಾರೆ. ಮಂಗಳೂರು ನಗರದ ಮೋರ್ಗನ್ ಗೇಟ್ ಬಳಿಯ ಮೈದಾನದಲ್ಲಿ ಗಾಂಜಾವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಹಾಗೂ ಸೇವನೆ ಮಾಡುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಎಕಾನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು.ದೇವನಹಳ್ಳಿ ಟೋಲ್ ಗೇಟ್ ಬಳಿ ಸಿಕ್ತು ಬರೋಬ್ಬರಿ 233 ಕೆಜಿ ಗಾಂಜಾದಾಳಿ ಸಂದರ್ಭದಲ್ಲಿ 8 ಮಂದಿ ಯುವಕರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಕ್ಷಯ್ ಕೆ ಪ್ರಸಾದ್ ಕೇರಳ ಕೊಲ್ಲಂ ನಿವಾಸಿ (22), ಮಂಗಳೂರಿನ ಕಣ್ಣೂರು ನಿವಾಸಿ ಜಾಫರ್ (22), ಕೇರಳದ ಕಣ್ಣೂರು ನಿವಾಸಿ ನಿಮಿಲ್ (21) , ಅಮಿತ್ ಶ್ರೀವತ್ಸನ್ (21), ಅಶ್ವಿನ್, (21), ಕೇರಳದ ಕೋಯಿಕೋಡ್ ನಿವಾಸಿ ಮೊಹಮ್ಮದ್ ಅಮೀರ್ (22) ಕೇರಳದ ಪತ್ತನತಿಟ್ಟಂ ನಿವಾಸಿ ಅಕಾಶ್ ಎಸ್ ನಾಯರ್, (23), ಹಾಗು ಕೇರಳದ ಕಣ್ಣೂರು ನಿವಾಸಿ ಅಕ್ಷಯ್, (22) ಎಂದು ಗುರುತಿಸಲಾಗಿದೆ.ಬಂಧಿತರಿಂದ 500 ಗ್ರಾಂ ಗಾಂಜಾ, 8 ಮೊಬೈಲ್ ಫೋನ್ ಗಳು, ನಗದು, 2 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ವಿದ್ಯಾರ್ಥಿಗಳು ಕೇರಳದಿಂದ ಗಾಂಜಾವನ್ನು ಖರೀದಿ ಮಾಡಿ ತಂದು ಮಂಗಳೂರು ನಗರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು.ನೂರಲ್ಲಿ ಅರಿಶಿನದ ನಡುವೆ ಗಾಂಜಾ ಬೆಳೆದ ಆರೋಪಿಗಳ ಬಂಧನಬಂಧಿತ ಆರೋಪಿಗಳ ಪೈಕಿ 7 ಮಂದಿ ಮಂಗಳೂರಿನ ಎರಡು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಹಾಗೂ ಒಂದು ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *