ಹುಬ್ಬಳ್ಳಿ: ಕುಮಾರಸ್ವಾಮಿ ತರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುತಿದ್ದಾರೆ.ಎಂ ಎಲ್ ಎ ಮಗನನ್ನು ಕಳಿಸಿಕೊಟ್ಟು ತಮಗೆ ಬೇಕಾದ ಹಾಗೆ ಮಾತನಾಡಿಸಿಕೊಂಡಿದ್ದಾರೆ. ನಾನು ಶರಣ ಗೌಡ ಅವರೊಂದಿಗೆ ಮಾತನಾಡಿದ್ದು, ಆದರೆ ಕುಮಾರಸ್ವಾಮಿ ಬೇಕಾದನ್ನು ಮಾತ್ರ ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಆಡಿಯೋದಲ್ಲಿ ಮಾತನಾಡಿದ್ದಯ ತಾವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ನನ್ನ ಬಳಿ ಶರಣ ಗೌಡ ಬಂದದ್ದು ನಿಜ. ಕುಮಾರಸ್ವಾಮಿ ಕುತಂತ್ರದಿಂದ ನನ್ನ ಬಳಿ ಶರಣ್ ಗೌಡ ಅವರನ್ನು ಕಳಿಸಿ ಕೊಟಿದ್ದಾರೆ. ಈ ರೀತಿಯಲ್ಲಿ ಯಾವುದೇ ಮುಖ್ಯಮಂತ್ರಿ ಈ ವರೆಗೂ ನಡೆದುಕೊಂಡಿಲ್ಲ.ನಾನು ಅವರ ಜೊತೆ ಮಾತನಾಡಿದ್ದು ನಿಜಆದ್ರೆ ಕೆಲ ಸತ್ಯಗಳನ್ನು ಮರೆ ಮಾಚಿದ್ದಾರೆ ಎಂದರು.ಸ್ವತಃ ಪ್ರಜ್ವಲ್ ರೇವಣ್ಣಾ ಅವರೇ ಹೇಳಿದ್ದಾರೆ.ನಮ್ಮದು ಸೂಟ್ ಕೇಸ್ ಸಂಸ್ಕೃತಿ. ಸೂಟ್ ಕೇಸ್ ಇಲ್ಲದೇ ಯಾವುದೇ ಕೆಲಸ ಆಗಲ್ಲ ಎಂದು. ಈ ಬಗ್ಗೆ ನನ್ನ ಬಳಿಯೂ ದಾಖಲೆ ಇವೆ.ಸೋಮವಾರ ಅವರ ಬಂಡವಾಳ ಬಯಲು ಮಾಡುವೆ. ನನ್ನ ಬಳಿಯೂ ಆಡಿಯೋ ಇದೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news




