ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಕಾರ್ಯಕ್ರಮ ಮಾಡುತ್ತುದ್ದಾರೋ ಸರ್ಕಾರಿ ಕಾರ್ಯಕ್ರಮ ಮಾಡುತ್ತಿದ್ದರೋ ಸ್ಪಷ್ಟಪಡಿಸಬೇಕು ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಣ ಅನೀಲ್ ಕುಮಾರ್ ಪಾಟೀಲ್ ಒತ್ತಾಯಿಸಿದರು.ಸರ್ಕಾರಿ ಕಾರ್ಯಕ್ರಮದ ಹೆಸರಿನಲ್ಲಿ ಪಕ್ಷದ ಕಾರ್ಯಕ್ರಮ ಮಾಡುತ್ತಿದ್ದಾರೆ.ಮೋದಿಯವರ ರ್ಯಾಲಿಗೆ ಕೇಂದ್ರ ಸರ್ಕಾರಿ ಕಚೇರಿ,ನೌಕರರ ದುರ್ಬಳಿಕೆ ಮಾಡುತ್ತಿದ್ದಾರೆ.ರೈಲ್ವೇ ಇಲಾಖೆಯ ಪ್ರತಿ ಡಿವಿಜನ್ ನಿಂದ 15 ಜನ ಪಾಲ್ಗೊಳ್ಳುವಂತೆ ಆದೇಶ ಮಾಡಲಾಗಿದೆ ಎಂದು ಆರೋಪಿಸಿದರು.ರೈಲ್ವೇ ಇಲಾಖೆ ಆದೇಶ ಪ್ರತಿಯನ್ನು ಬಿಡುಗಡೆ ಮಾಡಿದ ಅವರು, ಪ್ರತಿ ಇಲಾಖೆಯಿಂದಲೂ ಕಡ್ಡಾಯವಾಗಿ 15 ರಿಂದ 20 ಜನ ಬರುವಂತೆ ಆದೇಶ ಮಾಡಿದ್ದಾರೆ.ನೈಋತ್ಯ ರೈಲ್ವೈ ಇಲಾಖೆ ಡಿಆರ್ ಎಂ ನಿಂದ ಆದೇಶ ಮಾಡಲಾಗಿದೆ.ಮೋದಿಯವರಿಗೆ ಈ ಪರಸ್ಥಿತಿ ಏಕೆ ಬಂತು. ಜನ ಸಮಾವೇಶಕ್ಕೆ ಬರೋದಿಲ್ಲ ಎನ್ನೋ ಕಾರಣ ಸರ್ಕಾರಿ ನೌಕರರನ್ನ ಹೀಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.ಆಪರೇಷನ್ ಕಮಲ ಮಾಡುತ್ತಿರುವ ಬಿಎಸ್ ವೈ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಾಳೆ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆಯನ್ನುಅಂಬೇಡ್ಕರ್ ವೃತ್ತದಿಂದ ಚೆನ್ನಮ್ಮ ವೃತ್ತದವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





