ಬೆಂಗಳೂರು: ಲೋಕಸಭಾ ಚುನಾವಣೆಗೆ ದೋಸ್ತಿಗಳ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್ಗೆ ಕಾಂಗ್ರೆಸ್ ಶರಣಾಗದಿರಲು ತೀರ್ಮಾನಿಸಿದೆ. ಕಾಂಗ್ರೆಸ್, ಜೆಡಿಎಸ್ ಕೇಳಿರುವ 12 ಕ್ಷೇತ್ರಗಳನ್ನ ಬಿಟ್ಟುಕೊಡದಿರಲು ನಿರ್ಧರಿಸಿದೆ. ರಾಜ್ಯದಲ್ಲಿನ 28 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳನ್ನ ಜೆಡಿಎಸ್ಗೆ ಬಿಟ್ಟುಕೊಡುವುದು ಬೇಡವೆಂಬ ಅಭಿಪ್ರಾಯದಲ್ಲಿ ಕಾಂಗ್ರೆಸ್ ಮುಖಂಡರು ಇದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಸೀಟು ಹಂಚಿಕೆಯಲ್ಲಿ ಜೆಡಿಎಸ್ಗೆ ಶರಣಾಗದಿರಲು ಪಕ್ಷದೊಳಗೆ ಒತ್ತಡ ಹೆಚ್ಚಾಗಿದೆ ಎನ್ನಲಾಗುತ್ತಿದೆ.ನಮ್ಮ ಗುರಿ ಇರುವುದು ಬಿಜೆಪಿಯನ್ನ ಹೆಚ್ಚು ಸೀಟುಗಳ ಅಂತರದಿಂದ ಸೋಲಿಸುವುದು. ಹೀಗಿರುವಾಗ ಜೆಡಿಎಸ್ 12 ಕ್ಷೇತ್ರಗಳಿಗೆ ಬಿಗಿಪಟ್ಟು ಹಿಡಿದರೆ ಹೇಗೆ..? ಅಷ್ಟಕ್ಕೂ ಎಷ್ಟು ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಶಕ್ತಿ, ನೆಲೆ ಇದೆ ಎಂಬುದು ಮುಖ್ಯವಲ್ಲವೇ..? ಹಳೇ ಮೈಸೂರು ಭಾಗ ಹೊರತುಪಡಿಸಿದರೆ ಉಳಿದಂತೆ ಆ ಪಕ್ಷಕ್ಕೆ ಗಟ್ಟಿ ನೆಲೆಯೇ ಇಲ್ಲ. ಕಾಂಗ್ರೆಸ್ಗೆ ಇರುವಂತೆ ಎಲ್ಲಾ 28 ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಪ್ರಾಬಲ್ಯವೇ ಇಲ್ಲ. ಯಾವ ಮಾನದಂಡದ ಆಧಾರದ ಮೇಲೆ ಜೆಡಿಎಸ್ 12 ಕ್ಷೇತ್ರಗಳನ್ನ ಕೇಳಲಿದೆ ಎಂಬುದು ಕೈ ನಾಯಕರ ಪ್ರಶ್ನೆಯಾಗಿದೆ. ಕೊನೆ ಪಕ್ಷ 6-7 ಸೀಟುಗಳನ್ನ ಬಿಟ್ಟುಕೊಡಬಹುದೇ ಹೊರತು 12 ಕ್ಷೇತ್ರ ಕಷ್ಟಸಾಧ್ಯ ಎಂಬ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಜೆಡಿಎಸ್ ವರಿಷ್ಠರು ಎಷ್ಟೇ ಒತ್ತಡ ಹಾಕಿದರೂ ಹೈಕಮಾಂಡ್ಗೆ ವಸ್ತುಸ್ಥಿತಿ ತಿಳಿಸಬೇಕು. ಈ ಮೂಲಕ ಜೆಡಿಎಸ್ ಒತ್ತಡಕ್ಕೆ ಮಣಿಯದಂತೆ ನೋಡಿಕೊಳ್ಳಬೇಕೆಂಬ ಚರ್ಚೆಯಲ್ಲಿ ಕೈ ನಾಯಕರಿದ್ದಾರೆ. ರಾಜ್ಯ ಕೈ ನಾಯಕರಲ್ಲಿ ಸೀಟು ಹಂಚಿಕೆ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





