ಹುಬ್ಬಳ್ಳಿ: ಈಗಾಗಲೆ ಮೋದಿ ನನ್ನ ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಆದರೇ ಹೈ-ಕಯಾವುದೇ ಯೋಜನೆ ಬಗ್ಗೆ ಕೂಡ ಹೇಳಿಲ್ಲ ಅಷ್ಟೇ ಅಲ್ಲದೇ ಯಾವುದೇ ಅಭಿವೃದ್ಧಿ ಯೋಜನೆ ಬಗ್ಗೆ ಮಾತನಾಡಿಲ್ಲ ಕೇವಲ ಸುಳ್ಳು ಭಾಷಣ ಮಾಡುವುದು ಅವರ ಕಾಯಕವಾಗಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದರು.ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮೋದಿಯವರು ಬರಿ ಪ್ರಚಾರ ಮಾಡಿ ಹೋಗಿದ್ದಾರೆ ಆದರೇ ಅವರ ಯಾವುದೇ ಅಭಿವೃಧಿ ಕೆಲಸಗಳ ಬಗ್ಗೆಯೂ ಮಾತನಾಡಿಲ್ಲ.ಕೇವಲ ಬೆಂಗಳೂರು, ಹುಬ್ಬಳ್ಳಿಯ ಕೆಲ ಯೋಜನೆ ಉಧ್ಘಾಟನೆ ಮಾಡಿದ್ದಾರೆ ಎಂದರು.ಆದರೆ ಮೋದಿ ಸರ್ಕಾರ ಹೈ-ಕ ಭಾಗಕ್ಕೆ ಏನು ಕೊಡುಗೆ ನೀಡಿದೆ ಎಂದು ಹೇಳಿಲ್ಲ.ಅಲ್ಲದೆ ನನ್ನ ಕ್ಷೇತ್ರದ ಜನರಿಗೂ ಯಾವುದೇ ಯೋಜನೆಯ ಬಗ್ಗೆ ಹೇಳಿಲ್ಲ ಎಂದು ಅವರು ವ್ಯಂಗ್ಯವಾಡಿದರು.ಜಯದೇವ ಆಸ್ಪತ್ರೆ ಸೇರಿ ಕೆಲ ಯೋಜನೆಗಳು ನಮ್ಮಕಾಲದಲ್ಲಿ ಪ್ರಾರಂಭವಾಗಿದ್ದು, ಮೋದಿ ನನ್ನ ಮೇಲಿನ ಪ್ರೀತಿಯಂದ ಬಂದು ಪ್ರಚಾರ ಮಾಡಿದ್ದಾರೆ.ಹೀಗಾಗಿ ಕೇವಲ ಸುಳ್ಳು ಭಾಷಣ ಮಾಡಿದ್ದಾರೆ.ಪದೇ ಪದೇ ಸುಳ್ಳು ಹೇಳುವವರಿಗೆ ಏನು ಮಾಡೋಕ್ಕಾಗಲ್ಲ ಎಂದು ಲೇವಡಿ ಮಾಡಿದರು.ರೈತರಿಗೆ ಎಂಎಸ್ ಪಿ ಯೋಜನೆ ನೀಡಿಲ್ಲ.೧೫ ಲಕ್ಷ ಹಾಕ್ತಿನಿ ಎಂದಿದ್ರು ಅದು ಆಗಿಲ್ಲ.ಕೆಲವು ಇನ್ಸೂರೆನ್ಸ್ ಕಂಪನಿಗಳಿಗೆ ಲಾಭ ಮಾಡಿ ಕೊಟ್ಟಿದ್ದಾರೆ.ಜನರ ಆಶಿರ್ವಾದ ಎಲ್ಲಿಯವರೆಗೆ ಇರುತ್ತೋ, ಅಲ್ಲಿಯವರೆಗೆ ನನ್ಯಾರು ಏನು ಮಾಡೋಕ್ಕಾಗಲ್ಲ.ಏರ್ ಸ್ಟ್ರೈಕ್ ಯನ್ನ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಸೈನಿಕರ ಹೆಣದ ಮೇಲೆ ರಾಜಕೀಯ ಮಾಡೋದು ದುರ್ದೈವ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.ಕಾಂಗ್ರೆಸ್ ಪಕ್ಷದಿಂದ ಈಗಾಗಲೆ ಹೇಳಿದ್ದವೆ ಇದರಲ್ಲಿ ಯಾವುದೇ ರಾಜಕೀಯ ಮಾಡೋದಿಲ್ಲ ಅಂತ.ಅಲ್ಲದೆ ಎಲ್ಲಾ ವಿಪಕ್ಷಗಳು ದೇಶದ ಸೈನಿಕರ ವಿಚಾರದಲ್ಲಿ ಒಗ್ಗಟ್ಟಾಗಿ ಬೆಂಬಲ ನೀಡಿದ್ದವೆ.ಅಲ್ಲದೆ ನಮ್ಮ ಸರ್ಕಾರದ ಅವಧಿಯಲ್ಲಿ ಸುಮಾರು ೧೨ ಏರ್ ಸ್ಟ್ರೈಕ್ ಆಗಿದೆ, ಆದರೆ ನಾವು ಅದರ ಕ್ರಡಿಟ್ ತೆಗೆದುಕೊಂಡಿಲ್ಲ ಎಂದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





