ನವದೆಹಲಿ: ಲೋಕಸಭಾ ಚುನಾವಣೆಯ ಮಹಾಸಮರದಲ್ಲಿ ಈಗಾಗಲೇ ಅಖಾಡಕ್ಕಿಳಿದಿರುವ ಸರ್ವಪಕ್ಷಗಳು ಸೀಟು ಗೆದ್ದು ಸಿಹಿ ತಿನ್ನಲು ರಣತಂತ್ರ ರೂಪಿಸುತ್ತಿವೆ. ಅದ್ರಲ್ಲೂ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮತದಾರರಿಗೆ ಭರ್ಜರಿ ಆಫರ್ ಒಡ್ಡಿವೆ. ಈಗ ಮತ್ತೆ ದೇಶದ ಜನರನ್ನ ತನ್ನತ್ತ ಸೆಳೆದುಕೊಳ್ಳಲು ಪ್ರಣಾಳಿಕೆ ಬಿಡುಗಡೆಗೊಳಿಸುವ ಸರದಿ ಬಿಜೆಪಿಯದ್ದು. ‘ಸಂಕಲ್ಪ ಪತ್ರ’ ಎಂಬ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಲಿದ್ದಾರೆ. ಹಾಗಾಗಿ ಎಲ್ಲರ ಚಿತ್ತ ಬಿಜೆಪಿಯ ಪ್ರಣಾಳಿಕೆಯತ್ತ ನೆಟ್ಟಿದೆ.ರಾಷ್ಟ್ರೀಯ ಭದ್ರತೆ ಹಾಗೂ ಅಭಿವೃದ್ಧಿ ಮಂತ್ರ ಮೋದಿ ಪಕ್ಷದ ಪ್ರಣಾಳಿಕೆಯ ಹೈಲೈಟ್ಸ್ ಆಗುವ ಸಾಧ್ಯತೆಗಳಿವೆ. ಯುವಜನ, ಮಹಿಳೆಯರು, ವಿಶೇಷವಾಗಿ ರೈತರು ಹಾಗೂ ಸಮಾಜದ ಇತರೆ ವರ್ಗಗಳ ಮತ ಸೆಳೆಯಲು ಗಮನ ಹರಿಸಿ ಮೋದಿ ಪಾಳಯ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ ಎನ್ನಲಾಗ್ತಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





