ಹುಬ್ಬಳ್ಳಿ: ಹಾವು… ಎಂದಾಕ್ಷಣ ಎಲ್ಲರಲ್ಲಿಯೂ ಕೂಡ ಒಂದು ಭಯ ಹುಟ್ಟಿಕೊಳ್ಳುವುದು ಸರ್ವೆ ಸಾಮಾನ್ಯ ಅಲ್ಲದೇ ಹಾವಿನ ವಿಷಯದಲ್ಲಿ ಯಾರೂ ಕೂಡ ತಮಾಷೆ ಮಾಡಲು ಅದನ್ನು ಆಟವಾಡಿಸುವ ಗೋಜಿಗೆ ಹೋಗುವುದಿಲ್ಲ ಆದರೇ ಇಲ್ಲೊಬ್ಬ ಮಹನೀಯ ಹಾವಿನ ಜೊತೆಗೆ ಆಟ ಆಡುವ ಮೂಲಕ ಮನೆಯಲ್ಲಿಯೇ ಅವುಗಳಿಗೆ ಆಶ್ರಯ ನೀಡಿದ್ದು, ಎಲ್ಲರ ಗಮನ ತನ್ನತ್ತ ಸೆಳೆಯುವಂತೆ ಮಾಡಿದ್ದಾನೆ.ಹೌದು ನಾಗರಾಜ ರಾಗಿ ಎಂಬಾತನೇ ಉರಗ ಪ್ರೇಮಿ ಯುವಕ. ತನ್ನ ಉರಗ ಪ್ರೇಮವನ್ನು ಅವುಗಳ ಮೊಟ್ಟೆಗಳನ್ನು ತಂದು ಅವುಗಳ ಪಾಲನೆ ಮಾಡುವ ಮೂಲಕ ಮರಿ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.ಅಲ್ಲದೇ ಅವುಗಳೊಂದಿಗೆ ಸಹಜವಾಗಿ ಆಟವಾಡುವ ಹಾಗೂ ಅವುಗಳ ಪಾಲನೆ ಪೋಷಣೆಯ ಜವಾಬ್ಧಾರಿಯನ್ನು ಹೊತ್ತಿದ್ದಾನೆ. ಹಾವುಗಳಿಂದ ಭಯ ಬೀತರಾಗಿರುವ ಎಷ್ಟೋ ಜನರಿಗೆ ಹಾವುಗಳ ಹಾವಳಿಯಿಂದ ಮುಕ್ತಿ ದೊರಕಿಸಿದ್ದಾನೆ.ಮನೆಯಲ್ಲಿ ಅಂಗಳದಲ್ಲಿ ಎಲ್ಲಿ ಹಾವು ಕಂಡರೂ ಕೂಡ ಅದರೊಂದಿಗೆ ಆಟವಾಡುವ ಚಾತುರ್ಯವನ್ನು ನಾಗರಾಜ ಬೆಳಸಿಕೊಂಡಿದ್ದಾನೆ.ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಿಪಾಯಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಯುವಕ ನಿಜಕ್ಕೂ ದೈರ್ಯಶಾಲಿ.ಅಲ್ಲದೇ ಇವನ ಉರಗ ಪ್ರೇಮವನ್ನು ಕಂಡು ಸ್ಥಳಿಯರು ಅಚ್ಚರಿಗೊಂಡಿದ್ದಾರೆ.ಹೊಲದಲ್ಲಿ ಸಿಕ್ಕಿರುವ ಹಾವಿನ ಮೊಟ್ಟೆಗಳನ್ನು ತಂದು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಅವುಗಳನ್ನು ಮರಿ ಮಾಡಿ ಈಗ ಅವುಗಳನ್ನು ಮನೆಯಲ್ಲಿ ಆಟವಾಡಲು ಬಿಟ್ಟಿರುವುದು ನಿಜಕ್ಕೂ ಭಯ ಮೂಡಿಸುವ ಸಂಗತಿಯಾಗಿದ್ದರೂ ಕೂಡ ನಾಗರಾಜನ ಉರಗ ಪ್ರೇಮ ಸ್ಪಷ್ಟವಾಗಿ ಗೋಚರವಾಗುತ್ತದೆ. ದಯವಿಲ್ಲದ ಧರ್ಮ ಅದಾವುದಯ್ಯ ದಯಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ಎಂಬಂತೆ ನಾಗರಾಜ ತಮ್ಮ ಇಷ್ಟದ ಹಾವುಗಳ ಮೇಲೆ ಅಪಾರ ಪ್ರಮಾಣದ ಪ್ರೀತಿಯನ್ನು ಹೊರಹಾಕಿದ್ದಾರೆ. ಹಾವು ಎಂದರೇ ಎಲ್ಲರಿಗೂ ಭಯ ಅಲ್ಲದೆ ನಮ್ಮ ಜೀವಕ್ಕೆ ತೊಂದರೆಯಾಗಬಾರದೆಂಬ ಮನೋಭಾವನೆ ಎಲ್ಲರಲ್ಲಿಯೂ ಇರುತ್ತದೇ ಅದೇ ರೀತಿ ನಾಗರಾಜ ಅವರ ಉರಗ ಪ್ರೇಮ ಯಾರಿಗೂ ಕೂಡ ಹಾನಿ ಮಾಡಬಾರದು ಎಂಬುವುದು ನಮ್ಮ ಆಶಯ.
bigtvnews | Hubli Dharwad News | Kannada News | Karnataka News Hubli News | News In Hubli | Local news





