Breaking News

ಸಾಲ ತೀರಿಸಲು ಹಣಕ್ಕಾಗಿ ಕಿಡ್ನಾಪ್​ ನಾಟಕ; ಸ್ನೇಹಿತರ ಜೊತೆ ಜೊತೆ ಲಲ್ಲೆ ಹೊಡೆಯುತ್ತಿದ್ದ ಕಂಟ್ರ್ಯಾಕ್ಟರ್ ಅರೆಸ್ಟ್..

ಬೆಂಗಳೂರಿನ ಆರ್.ಆರ್. ನಗರದಲ್ಲಿ ಸಾಲ ತೀರಿಸಲು ಕಂಟ್ರ್ಯಾಕ್ಟರ್‌ವೊಬ್ಬರು ತಾನೇ ಕಿಡ್ನ್ಯಾಪ್ ಆಗಿರುವುದಾಗಿ ನಾಟಕವಾಡಿ ತಂದೆಯಿಂದ ₹90 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮನೀಶ್ ಪಟೇಲ್ (40) ಬಂಧಿತ ಆರೋಪಿ. ಸೆ.29ರಂದು ಮನೀಶ್ ಮೊಬೈಲ್‌ನಿಂದ ತಂದೆ ಮನೋಹರ್ ಪಟೇಲ್‌ಗೆ ವಾಟ್ಸ್‌ಆ್ಯಪ್ ಕರೆ ಮಾಡಿ, ಮಗನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಹೇಳಿ ₹90 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಆತಂಕಗೊಂಡ ತಂದೆ ಆರ್.ಆರ್. ನಗರ ಪೊಲೀಸರಿಗೆ ದೂರು ನೀಡಿದ್ದರು. ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರು ಮನೀಶ್ ಸ್ನೇಹಿತರೊಂದಿಗೆ ಇರುವುದನ್ನು ಪತ್ತೆಹಚ್ಚಿ ಮೂವರನ್ನು ವಶಕ್ಕೆ ಪಡೆದರು. ವಿಚಾರಣೆಯಲ್ಲಿ ವಿದ್ಯುತ್ ಕಾಂಟ್ರಾಕ್ಟ್ ಕೆಲಸದಲ್ಲಿ ₹1.5 ಕೋಟಿ ಸಾಲವಾಗಿದ್ದು, ಅದನ್ನು ತೀರಿಸಲು ಕಿಡ್ನ್ಯಾಪ್ ನಾಟಕವಾಡಿದ್ದಾಗಿ ಮನೀಶ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ! ರಾಯಚೂರು ಮೂಲದ ಆರು ಜನ ಗಂಭೀರ ಗಾಯ!

ಬೆಂಗಳೂರು, ಅ.3: ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಮಂದಿ ಗಾಯಗೊಂಡ ಘಟನೆ ನಾಯಂಡಹಳ್ಳಿಯ …

Leave a Reply

Your email address will not be published. Required fields are marked *