ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರು ಡಿನ್ನರ್ ಪಾರ್ಟಿ ನಡೆಸಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.ಹೊಟೇಲ್‌ವೊಂದರಲ್ಲಿ ಸುಮಲತಾ ಜೊತೆ ಕಾಂಗ್ರೆಸ್ ನಾಯಕರು ಮೀಟಿಂಗ್ ನಡೆಸಿದ ವೀಡಿಯೋ ಫೂಟೇಜ್ ದೊರಕಿದೆ.ಲೋಕಸಭಾ ಚುನಾವಣೆಯಲ್ಲಿ ಎಂಟು ಮಂದಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳು ಸುಮಲತಾ ಪರವಾಗಿ ಕೆಲಸ ಮಾಡಿದ್ದಾರಾ, ಇದಕ್ಕಾಗಿ ಅವರಿಗೆ ಕೃತಜ್ಞತಾ ಪಾರ್ಟಿ ಏರ್ಪಡಿಸಲಾಗಿತ್ತಾ ಎಂಬ ಪ್ರಶ್ನೆಗಳು ಮೂಡಿವೆ, ಸುಮಲತಾ ಜೊತೆ ಡಿನ್ನರ್‌ಗೆ ಸೇರಲು ಕಾರಣ ಏನು ಎಂಬುದರ ಬಗ್ಗೆ ಕೆಪಿಸಿಸಿ ವರದಿ ಕೇಳಿದೆ.ಬುಧವಾರ ಮಧ್ಯಾಹ್ನ ಸುಮಲತಾ ಜೊತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಚಂದ್ರಶೇಖರ್, ರಘುವೀರ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್ ಮಳವಳ್ಳಿ ಶಿವರಾಮ್ , ರಾಕ್ ಲೈನ್ ವೆಂಕಟೇಶ್ ಸಭೆ ನಡೆಸಿದ್ದರು.ಗೌಪ್ಯವಾಗಿ ನಡೆದಿದ್ದ ಮೀಟಿಂಗ್‌ನ ವಿಡಿಯೋ ಫೂಟೇಜ್ ಇಟ್ಟುಕೊಂಡು ಮೈತ್ರಿ ಸರ್ಕಾರ ಬಂಡಾಯ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





