ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಇಬ್ಬರು ಈಗ ‘ಭರತ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ಗೆ ಕತ್ರಿನಾ ಕುರಿತಾದ ಪರ್ಯಾನ ವೃತ್ತಿ ಜೀವನ ಕುರಿತ ಪ್ರಶ್ನೆ ಕೇಳಲಾಯಿತು.ಇದಕ್ಕೆ ಉತ್ತರಿಸಿದ ಅವರು ಮದುವೆಯಾಗಿ ಮಕ್ಕಳನ್ನು ಹೇರಬೇಕೆಂದು ಸೂಚಿಸಿದ್ದಾರೆ.ಬಾಲಿವುಡ್ ಹಂಗಾಮಾ ಜೊತೆಗಿನ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಗೆ ನಟಿ ಕತ್ರಿನಾ ಕೈಫ್ ಪ್ರತ್ಯೇಕ ವೃತ್ತಿ ಜೀವನ ಆರಂಭಿಸುವ ಬಗ್ಗೆ ಪ್ರಶ್ನೆ ಕೇಳಿದಾಗ ” ಆಕೆ ಮದುವೆಯಾಗಿ ಮಕ್ಕಳನ್ನು ಹೆರಬೇಕು” ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ರ ಈ ಸಲಹೆ ಈಗ ಮಹಿಳಾವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟೇ ಅಲ್ಲದೆ ಇದಕ್ಕೆ ಕತ್ರಿನಾ ಕೈಫ್ ಕೂಡ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಕತ್ರಿನಾ ಕೈಫ್ ತಮ್ಮ ಪರ್ಯಾಯ ವೃತ್ತಿ ಜೀವನ ವಿಚಾರವಾಗಿ ಉತ್ತರಿಸುತ್ತಾ ಡಾಕ್ಟರ್, ಇಂಜನಿಯರ್, ಎಂದು ಹೇಳುತ್ತಿದ್ದರೆ, ಸಲ್ಮಾನ್ ಖಾನ್ ಮಾತ್ರ ತಮ್ಮ ನಿಲುವನ್ನು ಬದಲಿಸದೆ ಆಕೆಯ ವಿವಾಹ ಮತ್ತು ಮದುವೆ ಬಗ್ಗೆ ವಿವರಣೆ ನೀಡುವುದರಲ್ಲೇ ಬ್ಯುಸಿಯಾಗಿದ್ದರು.ಇತ್ತೀಚೆಗೆ ಅರ್ಬಾಜ್ ಖಾನ್ ಅವರ ಟಾಕ್ ಶೋ ನಲ್ಲಿ ಕತ್ರಿನಾಗೆ ಅವರ ಮದುವೆಯ ಪ್ಲಾನ್ ಬಗ್ಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿ “ಯಾವುದೇ ಸುಳಿವು ಇನ್ನು ಇಲ್ಲ. ಒಂದು ದಿನ ಆ ನಿರ್ಧಾರ ಕೈಗೋಳ್ಳುತ್ತೇನೆ.ಜೀವನ ಎನ್ನುವುದು ಅನಿರೀಕ್ಷಿತ ಏನಾಗುತ್ತದೆ ಎನ್ನುವುದು ಯಾರಿಗೂ ತಿಳಿದಿರುವುದಿಲ್ಲ” ಎಂದು ಉತ್ತರಿಸಿದ್ದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





