ಟೌಂಟನ್: ಶಾಯ್ ಹೋಪ್(96), ಇವಿನ್ ಲೆವಿಸ್ (70) ಹಾಗೂ ಶಿಮ್ರೋನ್ ಹೇಟ್ಮೆರ್ ಅವರ ಅರ್ಧ ಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ವಿಶ್ವಕಪ್ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 322 ರನ್ಗಳ ಗುರಿ ನೀಡಿತು. ತಂಡ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321 ಮೊತ್ತ ಕಲೆ ಹಾಕಿತು.ಇಲ್ಲಿನ ದಿ ಕಾಪರ್ ಆಸೋಸಿಯೇಷನ್ ಕೌಂಟಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ವಿಂಡೀಸ್ ಎದುರಾಳಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಆರಂಭಿಕರಾಗಿ ಕ್ರೀಸ್ಗೆ ಆಗಮಿಸಿದ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ತೀರಾ ಕಳಪೆ ಆಟದೊಂದಿಗೆ ಶೂನ್ಯಕ್ಕೆ ಔಟಾದರು.ಮತ್ತೊಬ್ಬ ಆರಂಭಿಕ ಇವಿನ್ ಲೆವಿಸ್ (70), ಶಾಯ್ ಹೋಪ್ (96) ಹಾಗೂ ಶಿಮ್ರೋನ್ ಹೇಟ್ಮೆರ್ (50) ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಹೆಚ್ಚಿನ ಮೊತ್ತದ ಕೊಡುಗೆ ನೀಡಿದರು. ಬಳಿಕ ಬಂದ ನಾಯಕ ಜೇಸನ್ ಹೋಲ್ಡರ್ (33) ಸಾಧಾರಣ ಆಟವಾಡಿ ಶೀಘ್ರ ವಿಕೆಟ್ ಕಳೆದುಕೊಂಡರು.ಬಾಂಗ್ಲಾ ಪರ ಬೌಲಿಂಗ್ ಮಾಡಿದ ಮೊಹಮ್ಮದ್ ಶೈಫುದ್ದೀನ್ ಹಾಗೂ ಮುಶ್ಫಿಕ್ಯೂರ್ ರಹೀಮ್ ತಲಾ 3 ವಿಕೆಟ್ ಕಬಳಿಸಿದರೆ, ಶಕೀಬ್ ಆಲ್ ಹಸನ್ ಎರಡು ವಿಕೆಟ್ ತನ್ನದಾಗಿಸಿಕೊಂಡರು.
bigtvnews | Hubli Dharwad News | Kannada News | Karnataka News Hubli News | News In Hubli | Local news





