Breaking News

ಜೈಲಾಧಿಕಾರಿಯ ಲಂಚದ ದಾಹಕ್ಕೆ, ಖೈದಿ ಸಾವು.

ಜೈಲಿನಲ್ಲಿ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಖೈದಿಯ ಬಳಿ ಚಿಕಿತ್ಸೆ ಕೊಡಿಸಲು ಹಣ ಕೇಳಿದ ಜೈಲಾಧಿಕಾರಿ ಹಣ ನೀಡದ ಕಾರಣ ಖೈದಿ ಸಾವನ್ನಪ್ಪಿರುವುದರಿಂದ ಜೈಲಿನ ಖೈದಿಗಳಿಂದ ಪ್ರತಿಭಟನೆ ನಡೆಸಿರುವಂತಹ ಘಟನೆ ಬೆಂಗಳೂರಿನಪರಪ್ಪನ ಅಗ್ರಹಾರದ ಜೈಲಿನಲ್ಲಿ ನಡೆದಿದೆ,ಹೌದು ಪರಪ್ಪನ ಅಗ್ರಹಾರ ಕಾರಾಗೃಹ ಒಂದಲೋಂದು ಕಾರಣಗಳಿಂದ ಪದೇ ಪದೇ ಪ್ರತಿಭಟನೆಗಳು ಮರುಕಳಿಸುತ್ತಿರುವುದರಿಂದ ಎಲ್ಲಾ ಸರಿಯಿಲ್ಲ ಎನ್ನುವ ಅನುಮಾನ ಗಟ್ಟಿಗೊಳ್ಳುತ್ತಿದೆ. ಇದೀಗ ಕೈದಿ ಅಮೀರ್ ಮೂರನೇ ಬ್ಯಾರಕ್ ನಾಲ್ಕನೇ ಕೊಠಡಿಯಲ್ಲಿ ನರಳುತ್ತಿದ್ದರೂ ಚಿಕಿತ್ಸೆಕೊಡಿಸಲು ಹಣ ಬೇಡಿಕೆಯಿಟ್ಟಿದ್ದ ಜೈಲಿನ ಅಧಿಕಾರಿಗಳ ಕ್ರಮ ಪ್ರಶ್ನಿಸಿ 2000 ವಿಚಾರಣಾಧೀನ ಖೈದಿಗಳು ತಿಂಡಿ ಸೇವಿಸದೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ,ಇನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿರುವ ಖೈದಿಗಳು ಸಚಿವರು ಸ್ಥಳಕ್ಕೆ ಬರುವವರೆಗೂ ಪಟ್ಟು ಬಿಡುವುದಿಲ್ಲವೆಂದು ಧರಣಿ ಕುಳಿತಿದ್ದಾರೆ. ಕಾರ್ಯನಿರ್ವಾಹಕ ಜೈಲರ್ ವಿರುದ್ದ ವಿಚಾರಣಾಧೀನ ಖೈದಿಗಳು ಧರಣಿ ಕುಳಿತಿದ್ದು ಜೈಲಿನ ಖೈದಿಗಳ ಮೇಲೆ ಹಣಕ್ಕೆ ಬೇಡಿಕೆ ಇಡುವ ವ್ಯವಸ್ಥೆ ಕೂಡಲೇ ನಿಲ್ಲಬೇಕೆಂದು ರೊಚ್ಚಿಗೆದ್ದಿದ್ದಾರೆ.ಎಕ್ಸ್ಕ್ಯೂಟಿವ್ ಜೈಲರ್ ವಿರುದ್ಧ ವಿಚಾರಣಾಧಿನ ಖೈದಿಗಳ ಪ್ರತಿಭಟನೆ ನಡೆಸುತ್ತಿದ್ದು ಎಕ್ಸಿಕ್ಯೂಟಿವ್ ಜೈಲರ್ ಮಂಜುನಾಥ್ ಕಡೂರು ನಿರ್ಲಕ್ಷ್ಯ ತೋರಿದ್ದರಿಂದ ಖೈದಿ ಸಾವನ್ನಪ್ಪಿದ್ದಾನೆ ಇದು ಮುಂದುವರಿಯುತ್ತಲೇ ಇದೆ ಎಂದು ಖೈದಿಗಳು ಅಳಲತ್ತುಕೊಂಡಿದ್ದಾರೆ. ನಿನ್ನೆ ಜೈಲಿನ ಖೈದಿಯೊಬ್ಬರಿಗೆ ವಿಪರೀತ ಜ್ವರ ಬಂದಿತ್ತು. ಚಿಕಿತ್ಸೆಗಾಗಿ ಜೈಲಿನ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಹಣ ಹೊಂದಿಸಲಾಗದೆ ಬಿಪಿ ಹೆಚ್ಚಾಗಿ ಖೈದಿ ಮೃತಪಟ್ಟಿದ್ದ. ಇದನ್ನೆಲ್ಲಾ ಗಮನಿಸಿದ ವಿಚಾರಣಾಧೀನ ಖೈದಿಗಳು ಸಂಘಟಿತರಾಗಿ ಇವನ್ನು ನೇರವಾಗಿ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು ಕೆಳ ಅಧಿಕಾರಿಗಳನ್ನು ಬಿಟ್ಟುಕೊಡದ ಮೇಲಾಧಿಕಾರಿಗಳು ಇಂತಹ ಗಂಭೀರ ವಿಚಾರಗಳನ್ನು ಮುಚ್ಚಿಹಾಕಿ ಖೈದಿಗಳಿಗೆ ಘೋರ ಅನ್ಯಾಯವಾಗಿದೆ ಎಂದು ಪ್ರತಿಭಟನೆ ವೇಳೆ ಖೈದಿಗಳು ತಿಳಿಸಿರುವ ಬಗ್ಗೆ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.ಇನ್ನು ಜೈಲಿನ ಟವರ್ 1 ನಲ್ಲಿರುವ ವಿಚಾರಣಾಧೀನ ಖೈದಿಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಜೈಲೊಳಗಿನ ಶಿಷ್ಟಾಚಾರವೆಂಬಂತೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರುತ್ತಿದ್ದಾರೆ.

Share News

About Ambrish BIG TV NEWS,Anekal

Check Also

ಕೌಟುಂಬಿಕ ಕಲಹ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ವೈದ್ಯ ಡಾ.ಮಹೇಂದ್ರ ರೆಡ್ಡಿ ವೈದ್ಯೆಯಾಗಿದ್ದ ಪತ್ನಿ ಡಾ.ಕೃತ್ತಿಕಾ ರೆಡ್ಡಿಯನ್ನು ಕೊಲೆಗೈದುರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ …

Leave a Reply

Your email address will not be published. Required fields are marked *