Breaking News

ಸುರಭಿ ಟ್ರೇಡರ್ಸ್ ಮಾಲಿಕರಿಂದ ದೋಖ

ಸುರಭಿ ಟ್ರೇಡರ್ಸ್ ಮಾಲಿಕರಾದ ಫಹೀದ್ ನಚ್ಚಿಕದನ ಮತ್ತು ಇಲಿಯಾಸ್ ನಚ್ಚಿಕದನ ಎಂಬುವವರು ನನ್ನ ಪತಿಗೆ ಹಣ ದ್ವಿಗುಣಗೊಳಿಸುವ ಆಸೆ ತೋರಿಸಿ ಸುಮಾರು 80 . 78 ಲಕ್ಷ ರೂಗಳನ್ನು ತೊಡಗಿಸಿಕೊಂಡು ಹಣ ವಾಪಸ್ ಕೊಡದೆ ಮೋಸ ಮಾಡಿದ್ದಾರೆ ಎಂದು ಲಕ್ಷಿ ದ್ಯಾಮಣ್ಣ ಮೇಟಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಹಣವನ್ನು ನನ್ನ ಗಂಡ ತಮ್ಮ ಸ್ನೇಹಿತರ ಮತ್ತು ಸಂಬಂಧಿಗಳ ಜೊತೆಗೂಡಿ ಇಟ್ಟಿದ್ದು . ಈ ವಿಷಯವಾಗಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದಿನಾಂಕ 27 . 08 . 2017 ರಂದು ದೂರು ದಾಖಲಿಸಿದ್ದು , ಮುಂದಿ ಈ ಪ್ರಕರಣಕ್ಕೆ ಧಾರವಾಡ ಜಿಲ್ಲಾ ಆರ್ಥಿಕ ವಿಭಾಗಕ್ಕೆ ವರ್ಗಾವಣೆಗೊಂಡ ನಂತರ ಈ ವಿಷಯವಾಗಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಹಾಗು ಸಾಕಷ್ಟು ಬಾರಿ ಎಸ್ . ಪಿ . ಯವರಿಗೆ ಖುದ್ದು ಭೇಟಿ ನೀಡಿದರೂ ಪ್ರಕರಣ ಕುರಿತು ಎಳ್ಳಷ್ಟೂ ಕಾಳಜಿ ವಹಿಸಿಲ್ಲ ಇದರಿಂದಾಗಿ ನನ್ನ ಪತಿ ಹತಾಶೆಗೊಂಡು . ಅವರ ಪರಿಚಯದೊಂದಿಗೆ ಬಂಡವಾಳ ಹಾಕಿದವರು ಇವರ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು ಈ ವಿಷಯವಾಗಿ ನನ್ನ ಪತಿಗೆ ಅನು ಮಾಡಬೇಕೆಂದು ತಿಳಿಯದೆ 30 . 03 . 2019 ರಂದು ಡೆತ್ ನೋಟ್ ಬರೆದಿಟ್ಟು ಹೋಗಿದ್ದಾರೆ. ಈ ಪ್ರಕಹರಣದಲ್ಲಿ ನನ್ನ ಗಂಡನ ವಿರುದ್ದವಾಗಿ ಅನೇಕ ಘಟನೆಗಳು ನಡೆದವು . ಎನ್ . ಬಿ . ಡಬ್ಬು ನೆಪ ಮಾಡಿಕೊಂಡು ಮಸ್ಕಿ ಪೊಲೀಸ್ ಠಾಣೆಯಲ್ಲಿ ಅವರಿಗೆ ದೈಹಿಕ ಮಾನಸಿಕ ಕಿರುಕುಳ ಕೊಟ್ಟಿದಕ್ಕಾಗಿ ನನ್ನ ಗಂಡ ಬೇರೆ ದಾರಿ ಕಾಣದಂತಾಗಿ ಈ ರೀತಿ ಮನೆಬಿಟ್ಟು ಹೋಗಿರುತ್ತಾರೆ . ಈ ಘಟನೆ ನಡೆದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾದ ಅವರು ಶಾಲೆಗೂ ಹೋಗದೆ ರಜೆ ಹಾಕಿ ಸುಮಾರು ಒಂದು ತಿಂಗಳು ಮನೆಯಲ್ಲಿಯೇ ಉಳಿದರು . ಮಾರ್ಚ 30 ಕ್ಕೆ ಪತ್ರ ಬರೆದಿಟ್ಟು ಹೋದವರು ಇಲ್ಲಿಯವರೆಗೂ ಮನೆಗೆ ಬಂದಿಲ್ಲ . ಈ ಸಂಬಂಧವಾಗಿ ನಾನು ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೇನೆ , ಈ ಎಲ್ಲಾ ಘಟನೆಗೆ ಮೂಲ ಕಾರಣ ಫಹೀದ್ ನಚ್ಚಿಕದನ್ ಮತ್ತು ಅವನ ಸೋದರ ಇಲಿಯಾಸ್ ನಚ್ಚಿಕದನ . ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಅವರನ್ನು ಬಂದಿಸಬೇಕು . ಅವರ ಆಸ್ತಿ ಮುಟ್ಟುಗೋಲು ಹಾಕಿ . ನಮಗೆ ಬರಬೇಕಾದ 80 . 78 ಲಕ್ಷ ರೂ . ಗಳನ್ನು ನಮಗೆ ಕೊಡಿಸಬೇಕು . ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆಯವರು ಸುರಕ್ಷಿತವಾಗಿ ಮನೆಗೆ ವಾಪಸ್ ಬರಬೇಕು ಎಂದು ಕಣ್ಣೀರು ಹಾಕಿದರು

Share News

About Shaikh BIG TV NEWS, Hubballi

Check Also

ಕೃಷಿ ಮೇಳ ಕೇವಲ ಯಂತ್ರೋಪಕರಣಗಳ ಪ್ರದರ್ಶನವಾಗಬಾರದು..! ರೈತರಿಗೆ ಜ್ಞಾನ ನೀಡುವ ಪ್ರಾತ್ಯಕ್ಷಿಕೆಗಳಿಗೆ ಆದ್ಯತೆ ಸಿಗಲಿ…

ಪಾರಂಪರಿಕ ಕೃಷಿ ಜೊತೆ ವೈಜ್ಞಾನಿಕ ಕೃಷಿಯೂ ಬರಲಿ..! ರೈತರಿಗೆ ನೇರವಾಗಿ ಉಪಯೋಗವಾಗುವ ಕೃಷಿ ಮೇಳ ಬೇಕು: ಡಿಸಿಪಿ ರವೀಶ್ ಕೃಷಿ …

Leave a Reply

Your email address will not be published. Required fields are marked *