ಹಾಡಹಗಲೆ ಹುಬ್ಬಳ್ಳಿಯ ಸಬ್ ಜೈಲ್ ಮುಂದೆ ಎರಡು ಗುಂಪುಗಳ ಮಧ್ಯೆ ಗ್ಯಾಂಗ್ ವಾರ್ ನಡೆದಿದೆ. ಎರಡು ಗುಂಪುಗಳು ತಲ್ವಾರ್ ,ಮಚ್ಚು ಹಿಡಿದುಕೊಂಡು ಹೊಡೆದಾಡಿಕೊಂಡಿವೆ. ವಿಶ್ವೇಶ್ವರ ನಗರದಲ್ಲಿರುವ ಸಬ್ಜೈಲ್ಲಿನಲ್ಲಿದ್ದ ವ್ಯಕ್ತಿಯನ್ನ ನೋಡಲು ಬಂದಿದ್ದ ಟೀಂ ಮೇಲೆ ಮತ್ತೊಂದು ಗ್ಯಾಂಗ್ ಅಟ್ಯಾಕ್ ಮಾಡಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರವಾದ ಗಾಯಗಳಾಗಿವೆ. ಘಟನೆಯಲ್ಲಿ ಒಂದು ಮಾರುತಿ ಸಿಯಾಜ್ ಕಾರು ಸಂಪೂರ್ಣ ಜಖಂಗೊಂಡಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ ಎನ್ನಲಾಗಿದೆ. ಈ ಹಿಂದೆ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಬಂಧನವಾಗಿದ್ದ ಅಪರಾಧಿಗಳನ್ನು ನೋಡಲು ಬಂದಿದ್ದ ಸೂರಿಯ ಕಡೆಯವರ ಮೇಲೆ ಏಕಾಏಕಿ ಹಲ್ಲೆ ಮಾಡಲಾಗಿದೆ. ಕಳೆದ ವಾರದ ಸೆಟ್ಲಮೆಂಟ್ ನ ಶ್ಯಾಮ್ ಜಾಧವ್ ಹಾಗೂ ಇಮ್ರಾನ್ ಕಡೆಯ ಯುವಕರುಹಳೇ ಹುಬ್ಬಳ್ಳಿಯ ನೇಕಾರ ನಗರದಲ್ಲಿ ಇಮ್ರಾನ್ ಬಿಜಾಪುರ ಎಂಬ ಯುವಕನಿಗೆ ಚಾಕು ಇರಿಯಲಾಗಿತ್ತು.ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿ, ಸೂರಿ ಎಂಬುವರನ್ನು ಬಂಧಿಸಿ ಉಪ ಕಾರಾಗೃಹದಲ್ಲಿ ಇಡಲಾಗಿತ್ತು. ಗಿರಿ, ಸೂರಿಯನ್ನು ನೋಡಲು ಹತ್ತಕ್ಕೂ ಹೆಚ್ಚು ಜನ ಇಂದು ಜೈಲ್ ಕಡೆ ಬಂದಿದ್ದರು.ವಿಷಯ ತಿಳಿದ ಇಮ್ರಾನ್ ಅವರ ಕಡೆಯವರು ಸ್ಕೆಚ್ ಹಾಕಿ ಹಲ್ಲೆ ನಡೆಸಿದ್ದಾರೆ. ರವಿ ಮತ್ತು ಜುನೈದ್ ಮುಲ್ಲಾ ಸೇರಿ ಸುಮಾರು ಹದಿನೈದು ಜನರ ಮೇಲೆ ಅಟ್ಯಾಕ್ ಮಾಡಲಾಗಿದೆ. ಚಂದ್ರು ಗಡಗಿ, ಗಣೇಶ್ ಜಾಧವ್ ಸೇರಿ ಇಪ್ಪತ್ತೈದು ಜನರ ತಂಡ ಅಟ್ಯಾಕ್ ಮಾಡಿದೆ ಎನ್ನಲಾಗಿದೆ. ಘಟನೆಗೆ ಹಳೇ ದ್ವೇಷ ಕಾರಣ ಎನ್ನಲಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





