Breaking News

ಬ್ಯಾಟರಿ ಕದ್ದವನ ಪ್ರಾಣ ತೆಗೆದ್ರಾ ಪೋಲೀಸರು …!

ಹಣ ಕೊಡದಿದ್ದಕ್ಕೆ ಪೊಲೀಸರಿಂದಲೇ ಕೊಲೆ ?

ಹುಬ್ಬಳ್ಳಿ-ಕಳ್ಳತನ ಆರೋಪದ ಅಡಿಯಲ್ಲಿ ನ್ಯಾಯಂಗ ಬಂಧನದಲ್ಲಿದ್ದ ವ್ಯಕ್ತಿ
ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಳೆದ ೧೯ರಂದು ಲಾರಿ ಕಳ್ಳತನ
ಪ್ರಕರಣದಲ್ಲಿ ಶಹರ ಪೋಲಿಸ್ ಠಾಣೆಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ
ನೀಡಿದ್ದರು. ಆದ್ರೆ ಪ್ರಕರಣ ಸಂಬಂಧಿಸಿದಂತೆ ಒಟ್ಟು ಒಂಬತ್ತು ಜನರನ್ನು ಅರೆಸ್ಟ್ ಮಾಡಿದ್ದರು
ಬಳಿಕ ಅವರ ಬಳಿ ಹಣ ಪಡೆದು ಅವರನ್ನು ಬಿಟ್ಟು ಕಳಿಸಿದ್ದಾರಂತೆ , ಮೃತ ದಾವಲ್ ಸಾಬ್ ಗೂ ಕೂಡ ಹಣ ನೀಡುವಂತೆ ‌ಪೀಡಿಸಿದ್ದಾರಂತೆ. ಹಣ ನೀಡದ
ಹಿನ್ನೆಲೆಯಲ್ಲಿ ದಾವಲ್ ಸಾಬ್ ನನ್ನು ಹಿಗ್ಗಾ ಮುಗ್ಗಾ ತಳಿಸಿದ್ದಾರಂತೆ. ಬಳಿಕ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ , ಆರೋಪಿಯನ್ನು ಕಿಮ್ಸ್ ಗೆ ಚಿಕಿತ್ಸೆ ಗಾಗಿ ದಾಖಲಿಸಿದ್ದು , ಚಿಕಿತ್ಸೆ ಫಲಿಸದೆ ಕಿಮ್ಸ್ ಆಸ್ಪತ್ರೆಯಲ್ಲಿ ದಾವಲ್ ಸಾಬ್
ಮೃತಪಟ್ಟಿದ್ದಾರೆ. ಮೃತನ ಸಾವಿನ ಕುರಿತು ಕುಟುಂಬಸ್ಥರು ಪೋಲಿಸರೇ ಹೊಡೆದು ಸಾಯಿಸುರುವುದಾಗಿ
ಆರೋಪಿಸಿದ್ದಾರೆ. ಇನ್ನೂ ಪೋಲಿಸರು ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದರೂ
ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿಲ್ಲ ,ಅಲ್ಲದೇ
ಮೃತನ ದೇಹದ ಮೇಲೆ ರಕ್ತದ ಕಲೆ ಕಾಣುತಿದ್ದು ಪೋಲೀಸರೇ ಹೊಡೆದಿರುವುದಾಗಿ ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತು ಸೂಕ್ತ ತನಿಖೆಗಾಗಿ ಆಗ್ರಹಿಸಿದ್ದಾರೆ.

Share News

About Shaikh BIG TV NEWS, Hubballi

Check Also

ಕೃಷಿ ಮೇಳ ಕೇವಲ ಯಂತ್ರೋಪಕರಣಗಳ ಪ್ರದರ್ಶನವಾಗಬಾರದು..! ರೈತರಿಗೆ ಜ್ಞಾನ ನೀಡುವ ಪ್ರಾತ್ಯಕ್ಷಿಕೆಗಳಿಗೆ ಆದ್ಯತೆ ಸಿಗಲಿ…

ಪಾರಂಪರಿಕ ಕೃಷಿ ಜೊತೆ ವೈಜ್ಞಾನಿಕ ಕೃಷಿಯೂ ಬರಲಿ..! ರೈತರಿಗೆ ನೇರವಾಗಿ ಉಪಯೋಗವಾಗುವ ಕೃಷಿ ಮೇಳ ಬೇಕು: ಡಿಸಿಪಿ ರವೀಶ್ ಕೃಷಿ …

Leave a Reply

Your email address will not be published. Required fields are marked *