Breaking News

ಪುನೀತ ನುಡಿ ನಮನ ಕಾರ್ಯಕ್ರಮಕ್ಕೆ ಸಿದ್ಧಗೊಂಡಿರುವ ಅರಮನೆ ಮೈದಾನದ ಗಾಯತ್ರಿ ವಿಹಾರ..!

ಕರುನಾಡಿನ ಯುವರತ್ನ, ಚಂದನ ವನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮರೆಯಾಗಿ ಇಂದಿಗೆ ಹದಿನೈದು ದಿನಗಳೇ ಆಗುತ್ತ ಬಂದಿದ್ದರೂ ಕೂಡ, ಅವರ ಅಗಲಿಕೆಯ ನೋವೂ ಮಾತ್ರ ಇಂದಿಂಗೂ ಯಾರಿಂದಲೂ ಮರೆಯಲೂ ಆಗುತ್ತಿಲ್ಲ. ಈ ಮಧ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಕನ್ನಡ ಚಿತ್ರ ರಂಗದ ಪವರಾಗಿ ಇಂದು ಬೆಂಗಳೂರಿನಲ್ಲಿ ‘ಪುನೀತ್ ನಮನ’ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು, ಈ ಸಂಬಂಧ ಬೆಂಗಳೂರಿನ ಅರಮನೆ ಮೈಧಾನ ಸಿದ್ದಗೊಂಡಿದೆ.

ಇನ್ನು ಈ ವೈಶಿಷ್ಠಪೂರ್ಣ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಕಲಾವಿಧರು ಆಗಮಿಸಲಿದ್ದು, ಹೀಗಾಗಿ ಇಂದು ಚಿತ್ರ ಪದರ್ಶನ ಹೊರತು ಪಡಿಸಿ, ಚಿತ್ರರಂಗದ ಉಳಿದೆಲ್ಲ ಕಾರ್ಯಗಳಿಗೆ ರಜೆಯನ್ನ ಸಹ ಘೋಷಿಸಲಾಗಿದೆ.

ಇಂದು ಮಧ್ಯಾಹ್ನದ 3 ಗಂಟೆಯಿಂದ ಸಂಜೆ 6 ಗಂಟೆಯ ವರೆಗೂ ನಡೆಸಲು ಉದ್ದೇಶಿಸಲಾಗಿರುವ ಈ ಕಾರ್ಯಕ್ರಮಕ್ಕದಲ್ಲಿ 2 ಸಾವಿರಕ್ಕೂ ಅಧಿಕ ಗಣ್ಯರೂ ಭಾಗಿಯಾಗಲಿದ್ದಾರೆ. ಕನ್ನಡ ಚಿತ್ರರಂಗದ ಜತೆಗೆ ನೆರೆ ರಾಜ್ಯದ ಅಂದರೆ ದಕ್ಷಿಣ ಭಾರತದ ಚಿತ್ರರಂಗದಿಂದಲೂ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಸುಮಾರು 40ರಿಂದ 50 ಗಣ್ಯರ ಆಗಮನ ನಿರೀಕ್ಷೆ ಇರಲಿದೆ.

ಇತ್ತ ಕನ್ನಡ ಚಿತ್ರರಂಗದ ಬಹುತೇಕರೊಂದಿಗೆ ನಮ್ಮ ಅಪ್ಪು ಉತ್ತಮ ಬಾಂಧವ್ಯವನ್ನ ಹೊಂದಿದ್ದರು. ಅವರೆಲ್ಲರೊಂದಿಗೆ ಪುನೀತ್ ಅನ್ಯೋನ್ಯವಾಗಿದ್ದರು. ಆದ್ದರಿಂದಲೇ ಕನ್ನಡದ ಎಲ್ಲಾ ನಟರು ಆಗಮಿಸುವ ನಿರೀಕ್ಷೆ ಇದೆ. ರವಿಚಂದ್ರನ್, ಉಪೇಂದ್ರ, ಸುದೀಪ್, ಯಶ್, ರಕ್ಷಿತ್ ಶೆಟ್ಟಿ ಗಣೇಶ್, ಶ್ರೀಮುರಳಿ, , ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಕನ್ನಡದ ಎಲ್ಲಾ ಕಲಾವಿದರು ಭಾಗಿ ಆಗಲಿದ್ದು, ಪುನೀತ್ ಜೊತೆ ನಟಿಸಿದ ಎಲ್ಲಾ ನಾಯಕಿಯರು, ಹಿರಿಯ ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *