Breaking News

ಇಂದು ವಿಕ್ರಾಂತ್ ರೋಣ ವಿಶ್ವದಾದ್ಯಂತ ಬಿಡುಗಡೆ

ಬೆಂಗಳೂರು: ಸುದೀಪ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ವಿಕ್ರಾಂತ್ ರೋಣ’ ಇಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಕೇವಲ ಮೂರು ದಿನಗಳಲ್ಲಿ ಬೆಂಗಳೂರು, ಮುಂಬೈ ಹಾಗೂ ಹೈದರಾಬಾದ್​ನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಸಿದ ಚಿತ್ರತಂಡ ಬುಧವಾರ ದುಬೈನಲ್ಲಿ ಸ್ಪೆಷನ್ ಸ್ಕ್ರೀನಿಂಗ್ ಆಯೋಜಿಸಿತ್ತು.

ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳಲ್ಲೂ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ‘ವಿಕ್ರಾಂತ್ ರೋಣ’ ಬಿಡುಗಡೆ ಪರ್ವದ ಕುರಿತು ಮಾತನಾಡುವ ನಿರ್ವಪಕ ಜಾಕ್ ಮಂಜು, ‘ಇಂದು ಚಿತ್ರವು ಜಗತ್ತಿನಾದ್ಯಂತ 2ಡಿ ಹಾಗೂ 3ಡಿಯಲ್ಲಿ ಬಿಡುಗಡೆಯಾಗುತ್ತಿದೆ. ಮೊದಲ ಪ್ರಾಮುಖ್ಯತೆ 3ಡಿಗೆ ನೀಡುತ್ತಿದ್ದೇವೆ. 3ಡಿ ಇಲ್ಲದ ಕಡೆ 2ಡಿಯಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಥಿಯೇಟರ್​ಗಳು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುಮಾರು 450 ಥಿಯೇಟರ್​ಗಳು, ಹಿಂದಿ ರಾಜ್ಯಗಳಲ್ಲಿ 900ಕ್ಕೂ ಹೆಚ್ಚು ಥಿಯೇಟರ್​ಗಳು ಭಾರತದಲ್ಲಿ 2600ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ರಿಲೀಸ್ ಆಗುತ್ತಿದೆ’ ಎಂದು ಭಾರತದ ಥಿಯೇಟರ್​ಗಳ ಕುರಿತು ಅಂಕಿ ಅಂಶಗಳನ್ನು ನೀಡುತ್ತಾರೆ. ಇನ್ನು ವಿಶ್ವದಾದ್ಯಂತ 50 ದೇಶಗಳ 3500ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ‘ವಿಕ್ರಾಂತ್ ರೋಣ’ ಬರೋಬ್ಬರಿ ಆಗುತ್ತಿದೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *