Breaking News

ವಿದ್ಯುತ್ ತಗುಲಿ ಯುವತಿ ಸಾವು

ಧಾರವಾಡ: ಗೃಹ ಬಳಕೆಯ ನೀರಿನ ಮೊಟಾರ್‌ಗೆ ವಿದ್ಯುತ್ ಸಂಪರ್ಕ ಮಾಡಲು ಹೋಗಿ, ವಿದ್ಯುತ್ ತಗುಲಿ ಯುವತಿಯೋರ್ವಳು ಸಾವನಪ್ಪಿರುವ ಘಟನೆ ಧಾರವಾಡ ತಾಲ್ಲೂಕಿನ ಹಳೇ ತೆಗೂರು ಗ್ರಾಮದಲ್ಲಿ ನಡೆದಿದೆ.

ದಿವ್ಯಾ ಮಡಿವಾಳಪ್ಪ ಹಡಪದ (21)ಮೃತ‌ ಯುವತಿ‌ ಎಂದು ಗುರುತಿಸಲಾಗಿದೆ. ನಿನ್ನೆ ಮನೆಗೆ ನೀರಿನ ಮೋಟಾರ್ ಸಾಹಾದಿಂದ ಮನೆಗೆ ನೀರು ತುಂಬಿಸಲು ಮುಂದಾಗಿದ್ದಾರೆ. ಈ ವೇಳೆ ನೀರಿನ ಮೋಟಾರಗೆ ವಿದ್ಯುತ್ ಕನೆಕ್ಷನ್ ಕೊಟ್ಟಿದ್ದಾರೆ. ಹಾಗೇ ನೀರಿನ ಮೋಟಾರ್‌ನ್ನು ಎತ್ತಿ ಇಡಲು ಮುಂದಾದಾಗ ವಿದ್ಯುತ್ ತಗುಲಿ ಯುವತಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಗ್ರಾಮಸ್ಥರ ಧಾರವಾಡ ಗರಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯ ಮೃತ ದೇಹವನ್ಮು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *