Breaking News

ನ.26 ಕ್ಕೆ ಅಮೃತ ಅಪಾರ್ಟ್ಮೆಂಟ್ಸ್ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ

ಹುಬ್ಬಳ್ಳಿ: ಜಿ-9 ಕಮ್ಯುನಿಕೇಶನ್ಸ್ ಮೀಡಿಯಾ ಆ್ಯಂಡ್ ಎಂಟರ್ಟೈನ್ಮೆಂಟ್ ನಿರ್ಮಾಣದ ಅಮೃತ ಅಪಾರ್ಟ್ಮೆಂಟ್ಸ್ ಚಲನಚಿತ್ರ ನ.26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಸಾಹಿತಿಗಳಾದ ಶ್ಯಾಮಸುಂದರ್ ಬಿದರಕುಂದಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಅಮೃತ್ ಅಪಾರ್ಟ್ಮೆಂಟ್ ಇದು ನಗರ ಜೀವನ ಕುರಿತು ಇರುವ ಕತೆ. ಸಂಬಂಧಗಳು, ಭಾವನೆಗಳು, ಅಧುನಿಕ ಜೀವನ ಹೀಗೆ ಸಾಕಷ್ಟುಅಂಶಗಳು ಚಿತ್ರದಲ್ಲಿ ಬರುತ್ತವೆ. ಗುರುರಾಜ್‌ ಕುಲಕರ್ಣಿ ನಿರ್ಮಿಸಿ, ನಿರ್ದೇಶನ ಮಾಡಿರುವ ಚಿತ್ರವಿದು. ತಾರಕ್‌ ಪೊನ್ನಪ್ಪ, ಬಾಲಾಜಿ ಮನೋಹರ್‌, ಸಂಪತ್‌ಕುಮಾರ್‌, ಸೀತಾ ಕೋಟೆ, ಮಾನಸ ಜೋಷಿ, ಊರ್ವಶಿ ಗೋವರ್ಧನ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ ಎಂದರು.

ಚಿತ್ರವನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಎರಡು ಹಾಡಗಳಿವೆ. ನಟಿ ಮಾನಸ ಜೋಷಿ ಇಲ್ಲಿ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಾರಕ್‌ ಪೊನ್ನಪ್ಪ ಚಿತ್ರದ ಮುಖ್ಯಪಾತ್ರಧಾರಿ. ‘ನಗರ ಪ್ರದೇಶದಲ್ಲಿ ನೆಲೆಸಿರುವ ಮಧ್ಯಮ ದಂಪತಿ ಮೂಲಕ ಒಂದು ದೊಡ್ಡ ಕತೆಯನ್ನು ಚಿತ್ರದ ಮೂಲಕ ಹೇಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ ನಿಸಾಸಂ, ಮಾಲತೇಶ , ಕೃಷ್ಣ ಅರವಳ್ಳಿ ಇದ್ದರು.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *