ಕಿಮ್ಸ್ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಹೃದಯ ರೋಗಕ್ಕೆ ಸರಿಯಾದ ಚಿಕಿತ್ಸೆ: ತಜ್ಞ ವೈದ್ಯರಿಲ್ಲ, ಅಗತ್ಯ ಸಲಕರಣೆ ಇಲ್ಲವೇ ಇಲ್ಲ…!

ಹುಬ್ಬಳ್ಳಿ :

ಅದು ಇಡೀ ಉತ್ತರ ಕರ್ನಾಟಕ ಭಾಗದ ಬಡರೋಗಿಗಳಿಗೆ ಸಂಜೀವಿನಿ ಎಂದೇ ಹೆಸರು ವಾಸಿಯಾಗಿರುವ ಆಸ್ಪತ್ರೆ.‌ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆ ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರ ಚಿಕಿತ್ಸೆಗೆ ಬೇಕಾದ ನುರಿತ ತಜ್ಞರೂ ಇಲ್ಲ, ಅಗತ್ಯ ಸಲಕರಣೆಗಳೂ ಇಲ್ಲ.

ಹೌದು.. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯ ವ್ಯವಸ್ಥೆಯಿಲ್ಲದೇ ಹೃದಯ ರೋಗಿಗಳು ಪರದಾಡುವಂತಾಗಿದೆ. ಉತ್ತರ ಕರ್ನಾಟಕದ ಐದಾರೂ ಜಿಲ್ಲೆಯ ರೋಗಿಗಳಿಗೆ ಆಧಾರವಾದ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 20-30 ಮತ್ತು ವರ್ಷಕ್ಕೆ 500 ರಿಂದ 600 ಕ್ಕೂ ಹೆಚ್ಚು ಹೃದಯ ರೋಗಿಗಳು ದಾಖಲಾಗುತ್ತಾರೆ.‌ ಆದರೆ ಇಲ್ಲಿ ತೆರದ ಹೃದಯ ಶಸ್ತ್ರ ಚಿಕಿತ್ಸೆಗೆ ನುರಿತ ತಜ್ಞ ವೈದ್ಯರಿಲ್ಲ. ಅಲ್ಲದೆ ಅಗತ್ಯ ಸಲಕರಣೆಗಳಿಲ್ಲದೇ ಸಾರ್ವಜನಿಕರು ಪರದಾಡುವಂತಾಗಿದ್ದು, ಸರ್ಕಾರದ ಈ ನಡೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಡಾ.ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್ ನಿರ್ದೇಶಕ

ಇನ್ನೂ ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ಸ್ಥಿತಿವಂತವರು ಖಾಸಗಿ ಆಸ್ಪತ್ರೆಗೆ ಮೊರೆ ಹೋದರೆ, ಬಡವರು ಹಣಕಾಸಿನ ಸಮಸ್ಯೆಯಿಂದ ಚಿಕಿತ್ಸೆ ಪಡೆಯದೇ ಅನೇಕ ಜನರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎಲ್ಲ ವಯಸ್ಕರಲ್ಲಿ ಹೆಚ್ಚಾಗುತ್ತಿದೆ. ಸರಿಯಾದ ಚಿಕಿತ್ಸೆ ದೊರಕದೇ ಅತೀ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಕಿಮ್ಸ್‌ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ನೀಡಲು ಸಲಕರಣೆಗಳ ಸೌಲಭ್ಯವಿಲ್ಲದೆ ಅದೇ ವೈದ್ಯರು ಬೆಂಗಳೂರಿನಲ್ಲಿರುವ ಜಯದೇವ ಆಸ್ಪತ್ರೆಗೆ ಮತ್ತು ಹಲವಾರ ಖಾಸಗಿ ಆಸ್ಪತ್ರೆಗೆ ಶಿರಸ್ಸು ಮಾಡುತ್ತಿದ್ದಾರೆ. ಆದರೆ ಬಡಜನರು ಅಲ್ಲಿಗೆ ಹೋಗಿ ಚಿಕಿತ್ಸೆ ಪಡಯಬೇಕೆಂದರೆ ಲಕ್ಷಾಂತರ ಹಣ ವ್ಯಯ ಮಾಡಬೇಕಾಗುತ್ತದೆ. ಆದರಿಂದ ಇದು ಬಡಜನರಿಗೆ ಕಬ್ಬಿನ ಕಡಲೆಯಾಗಿದ್ದು, ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಿಮ್ಸ್ ಆಸ್ಪತ್ರೆಯಲ್ಲಿ ಹೃದ್ರೋಗ ಹಾಗೂ ಶಸ್ತ್ರಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಇಲ್ಲದಿರುವುದು ಸರ್ಕಾರದ ನಿಷ್ಕಾಳಜಿ ತೋರಿಸುತ್ತಿದೆ.

ಒಟ್ಟಾರೆ ಪ್ರತಿ ವರ್ಷ ಕಿಮ್ಸ್ ಆಸ್ಪತ್ರೆಗೆ ಕೋಟಿ‌ ಕೋಟಿ‌ ಅನುದಾನ ಬಿಡುಗಡೆಯಾದರೂ ಓಪನ್ ಹಾರ್ಟ್ ಸರ್ಜರಿಗೆ ಬೇಕಾದ ಸಲಕರಣೆಗಳ ಸೌಲಭ್ಯವನ್ನು ಈ ಆಸ್ಪತ್ರೆಯಲ್ಲಿ ಕಲ್ಪಿಸಿಲ್ಲ. ಇನ್ನಾದರೂ ಈ ಸಂಜೀವಿನಿಯಲ್ಲಿ ನುರಿತ ತಜ್ಞ ವೈದ್ಯರನ್ನು ನೇಮಿಸಿ ಹೃದಯ ಶಸ್ತ್ರ ಚಿಕಿತ್ಸೆಗೆ ಬೇಕಾದ ಸೌಲಭ್ಯ ಒದಗಿಸಿ ಸರ್ಕಾರ ಬಡಜನರ ಜೀವನ ಕಾಪಾಡಬೇಕಾಗಿದೆ.

Share News

About BigTv News

Check Also

ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ …

Leave a Reply

Your email address will not be published. Required fields are marked *

You cannot copy content of this page