Breaking News

ಡಿಜಿಟಲ್‌ ಅರೆಸ್ಟ್‌ ಪ್ರಕರಣ: ವೃದ್ಧ ನಾಗರಿಕರಿಬ್ಬರನ್ನು ಬೆದರಿಸಿ 74 ಲಕ್ಷ ರೂ. ಸುಲಿಗೆ

ಉಡುಪಿ ಜಿಲ್ಲೆಯ ಬ್ರಹ್ಮಾವರದ 66 ವರ್ಷದ ಶೀಲಾ ಅವರಿಗೆ ನಕಲಿ ಪೊಲೀಸ್ ಅಧಿಕಾರಿಗಳು ವಾಟ್ಸಪ್ ವಿಡಿಯೊ ಕರೆ ಮಾಡಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿ ₹65 ಲಕ್ಷ ವಂಚಿಸಿದ್ದಾರೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿರುವುದಾಗಿ ಹೇಳಿ, ಪರಿಶೀಲನೆ ನೆಪದಲ್ಲಿ ಹಲವು ದಿನಗಳ ಕಾಲ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಸಂಶಯಾಸ್ಪದ ಹಣ ವರ್ಗಾವಣೆಯ ಮಾಹಿತಿ ಪಡೆದ ಬ್ರಹ್ಮಾವರ ಪಿಎಸ್‌ಐ ಅಶೋಕ್ ಮಳಬಗಿ ತಕ್ಷಣ ಮಹಿಳೆಯ ಮನೆಗೆ ತೆರಳಿ ಮತ್ತಷ್ಟು ₹15 ಲಕ್ಷ ವಂಚನೆಯಾಗುವುದನ್ನು ತಡೆದಿದ್ದಾರೆ. ಮಹಿಳೆ ಆಸ್ತಿ ಮಾರಾಟದ ಹಣ ಹಾಗೂ ಕುಟುಂಬದ ಉಳಿತಾಯವನ್ನು ಈಗಾಗಲೇ ಕಳೆದುಕೊಂಡಿದ್ದರು. ಇದೇ ರೀತಿಯ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳಲ್ಲಿ ಉಡುಪಿಯ ಮತ್ತಿಬ್ಬರು ಹಿರಿಯ ನಾಗರಿಕರಿಂದ ₹22 ಲಕ್ಷ ಮತ್ತು ₹9.29 ಲಕ್ಷ ವಂಚಿಸಲಾಗಿದೆ. ಇಂತಹ ಕರೆಗಳಿಗೆ ಹೆದರದೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆ ಅಥವಾ 1930 ಸಹಾಯವಾಣಿ ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *