Breaking News

ಬೆಂಗಳೂರಿನಲ್ಲಿ ಕಳೆದ ಹೋಗಿದ್ದ ಪುತ್ತೂರಿನ ಮಹಿಳೆಯ ಬ್ಯಾಗ್‌ ಪತ್ತೆ

ಪುತ್ತೂರು: ಬೆಂಗಳೂರಿನಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪುತ್ತೂರಿನ ಮಹಿಳೆಯೊಬ್ಬರ ಲಗೇಜ್ ಬ್ಯಾಗ್ ಕಳೆದುಹೋಗಿದ್ದು, ಇದನ್ನು ನಾಲ್ಕು ದಿನಗಳ ಬಳಿಕ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಪತ್ತೆ ಮಾಡಿದ್ದಾರೆ. ಪುತ್ತೂರು ನಗರದ ತೆಂಕಿಲ ನೂಜಿ ನಿವಾಸಿ ರಕ್ಷಿತಾ ದುಬಾಯಿಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಾ.7 ರಂದು ರಾತ್ರಿ 11.30ಕ್ಕೆ ದುಬಾಯಿಯಿಂದ ಬಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿಂದ ಖಾಸಗಿ ಬಸ್ ಒಂದರಲ್ಲಿ ಮೆಜೆಸ್ಟಿಕ್ ಬಸ್ ಹತ್ತಿದ್ದರು. ಬಸ್ ಪ್ರಯಾಣದ ವೇಳೆ ಇವರ ಲಗೇಜ್ ಅನ್ನು ಬಸ್ಸಿನ ಲಗೇಜ್ ಬಾಕ್ಸ್‌ನಲ್ಲಿ ಇರಿಸಿದ್ದರು. ಮೆಜೆಸ್ಟಿಕ್ ಬಂದು ನೋಡುವಾಗ ಲಗೇಜ್ ಇರಲಿಲ್ಲ. ಈ ಬಗ್ಗೆ ಬಸ್ ನವರಲ್ಲಿ ಕೇಳಿದಾಗ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ಮಾ. 8 ರಂದು ಈ ಬಗ್ಗೆ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು. ಲಗೇಜ್ ಕಳೆದುಹೋಗಿದ್ದ ಬಗ್ಗೆ ಶಾಸಕ ಅಶೋಕ್ ರೈ ಕೂಡ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ಮಾಹಿತಿ ನೀಡಿದ್ದರು.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *