ಧಾರವಾಡ :ಉಪನ್ಯಾಸಕರೊಬ್ಬರ ಪೇಸ್ ಬುಕ್ ಪೇಜ್ ಅನ್ನು ಹ್ಯಾಕ್ ಮಾಡಿದ ಅಪರಿಚಿತ ವ್ಯಕ್ತಿ ಗಳು ಹಣದ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಉಪನ್ಯಾಸಕರಾದ ಮಹಾಂತೇಶ ಸೊಗಲದ ಅವರು ಸ್ನೇಹಿತರಿಗೆ, ಸಂಬಂಧಿಕರಿಗೆ ಹಾಗೂ ಪರಿಚಯದವರಿಗೆ ಹಣ ನೀಡಿದಂತೆ ಮನವಿ ಮಾಡಿದ್ದಾರೆ.
ಧಾರವಾಡ ನಗರದಲ್ಲಿ ಖಾಸಗಿ ಕಾಲೇಜುವೊಂದರಲ್ಲಿ ಉಪನ್ಯಾಸಕಾರಾಗಿ ಸೇವೆ ಸೇವೆ ಸಲ್ಲಿಸುತ್ತಿರುವ ಮಹಾಂತೇಶ ಸೊಗಲದ ಅವರಪೇಸ್ ಬುಕ್ ಹ್ಯಾಕ್ ಮಾಡಿ 2000,3000, 6000 ಹೀಗೆ ಬೇಕಾಬಿಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಹಾಗೂ ಇಡುತಿದ್ದಾರೆ.
ಅವರಿಗೆ ಈ ಘಟನೆಯಿಂದ ಕಿರಿಕಿರಿಯಾಗಿದ್ದು ಈ ಬಗ್ಗೆ ಮನವಿ ಮಾಡಿದ್ದಾರೆ ಇದೇ ರೀತಿ ಮುಂದುವರಿದರೆ ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಸಹ ದೂರು ನೀಡಲಿದ್ದಾರೆ.ಇಂತಹ ಘಟನೆಗಳು ಹುಬ್ಬಳ್ಳಿ ಧಾರವಾಡ ನಗರದಲ್ಲಿ ಮೇಲಿಂದ ಮೇಲೆ ನಡೆಯುತಿದ್ದು
ಸಾರ್ವಜನಿಕ ರು ಎಚ್ಚರಿಕೆ ಯಿಂದ ಇರುವ ಅಗತ್ಯವಿದೆ. ಜೊತೆಗೆ ರತ್ನ ದೇವ್ ಅವರ ಪೇಸ್ ಬುಕ್ ಹ್ಯಾಕ್ ಮಾಡಲಾಗಿರುವುದರಿಂದ
ಮತ್ತು ಸುಳ್ಳು ಸುದ್ದಿ ಯನ್ನು ಹಬ್ಬಿಸಿ ಹಣ ವಸೂಲಿಗೆ ಯತ್ನಿಸಿರುವುದರಿಂದ ಅವರ ಸ್ನೇಹಿತರು ಹಣ ನೀಡದಂತೆ ಅವರು ಮನವಿ ಮಾಡಿದ್ದು ಒಳ್ಳೆಯ ವಿಚಾರ.
bigtvnews | Hubli Dharwad News | Kannada News | Karnataka News Hubli News | News In Hubli | Local news

