ಧಾರವಾಡ :ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಾಗಿದೆ. ಸಿದ್ದಾಂತ ಮತ್ತು ನಾಯಕತ್ವಕ್ಕೆ ಗೆಲುವಾಗಿದೆ ಕಾಂಗ್ರೆಸ್ ನ ಎಲ್ಲ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಗ್ರಾಮ ಸ್ವರಾಜ್ ನಲ್ಲಿ ಈ ಸರ್ಕಾರ ದುರ್ಬಲ ಮಾಡಿದೆ ರಾಜೀವ್ ಗಾಂಧಿ ಕನಸು ಗ್ರಾಮೀಣಕ್ಕೆ ಹೆಚ್ಚು ಒಲವು ತೋರಿದ್ರು ಆದ್ರೆ ಬೆಲೆ ಏರಿಕೆ ಸೇರಿದಂತೆ ಹಲವು ರೀತಿಯಾಗಿ ಜನರಿಗೆ ಸಮಸ್ಯೆಯಾಗಿದೆ.
ಒಟ್ಟಾರೆ ಎಲ್ಲರೂ ಸೇರಿ ಈ ಚುನಾವಣೆ ಮಾಡಿದ್ವಿ, ನನ್ನ ಗೆಲುವು ಕಾರ್ಯಕರ್ತರ ಗೆಲುವು ಸದನದಲ್ಲಿ ಸರ್ಕಾರದ ವಿರುದ್ಧ ಧ್ವನಿಯಾಗುತ್ತೇನೆ. ಈ ಭಾಗದ ಜನರಿಗೆ ಏನೆಲ್ಲ ಸಮಸ್ಯೆ ಇದೆ ಅದನ್ನ ನಾನು ಚರ್ಚೆ ಮಾಡುತ್ತೇನೆ ನಮಗೆ ಯಾರು ಮತ ನೀಡಿದ್ದಾರೆ. ಅದೇ ಅವರಿಗೆ ಉತ್ತರಯಾರೊಬ್ಬರಿಗೂ ಒಂದೇ ಒಂದು ಮನೆಯನ್ನ ಈ ಸರ್ಕಾರ ಕೊಟ್ಟಿಲ್ಲ. ಯಾವ ಪುರುಷಾರ್ಥಕ್ಕೆ ಬಿಜೆಪಿಗೆ ಮತ ಹಾಕಬೇಕು ಅನುದಾನ ಬಿಡುಗಡೆಯಾಗಿಲ್ಲ, ರೈತರ ರಕ್ಷಣೆ ಆಗುತ್ತಿಲ್ಲ. 3 ಕಾಯ್ದೆ ವಿರುದ್ಧವಾಗಿ ನಾವು ಪ್ರಚಾರ ಮಾಡಿದ್ವಿ 7 ವರ್ಷದಿಂದ ಮೋದಿ ಸುಳ್ಳು ಹೇಳುತ್ತಿದ್ದಾರೆ.
ಅವರ ಸುಳ್ಳಿಗೆ ಜನ ಮತ ಹಾಕಬೇಕಾ? ಅಧಿಕಾರ ಬರುವ ಮೊದಲು ಹೇಳಿದ್ದು ಸ್ವರ್ಗ ತೋರಿಸುತ್ತೇವೆಂದು ಆದ್ರೆ ಕೊರೊನ ಸಮಯದಲ್ಲಿ ನರಕ ತೋರಿಸಿದ್ರು ಅಹಂ ಬ್ರಹ್ಮಾಸ್ಮಿ ಅನ್ನೋದು ಮೋದಿ ಅವರಿಗೆ ಒಪ್ಪುತ್ತೆ. ಅವರ ದುರಂಕಾರಕ್ಕೆ 7 ಜನರು ಸತ್ತಿದ್ದಾರೆ. ಇವರ ಕರ್ಮಕಾಂಡಗಳನ್ನ ನಾವು ಜನರಿಗೆ ಹೇಳುತ್ತೇವೆ ಈಗಾಗಲೇ ಇಲ್ಲಿಂದ ಒಂದು ಸಂದೇಶ ಹೋಗಿದೆ ಮಾನೆ ಯವರ ಗೆಲುವು ಮತ್ತು ನಮ್ಮ ಗೆಲುವು ಒಂದು ಸಂದೇಶ ನೀಡಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಹೊರಟಿದೆ. ಬಿಜೆಪಿ ಸೋಲುವ ಭಯ ಈಗಾಗಲೇ ಕಾಡುತ್ತಿದೆ. ನಾವು ಯಾವುದೇ ರೀತಿಯಲ್ಲಿ ಅಂಡರ್ಸ್ಟ್ಯಾಂಡಿಂಗ್ ರಾಜಕೀಯ ಮಾಡಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

