ನಾಣ್ಯಾಪುರ: ಗ್ರಾಮದಲ್ಲಿ ಮರಳು ಗಳ್ಳರ ಹಾವಳಿ ಹೆಚ್ಚಾಗಿದ್ದು.ಅವರು ಮರಳಿನ ಜೊತೆಗೆ ಪಂಪ್ಸೆಟ್ ಸಾಮಾಗ್ರಿಗಳನ್ನೂ ಕದಿಯುತ್ತಿದ್ದಾರೆ ಮತ್ತು ಬಿತ್ತಿ ಬೆಳೆದ ಹೊಲಗಳಲ್ಲಿ ಟ್ರಾಕ್ಟರ್ ಗಳನ್ನು ಬೇಕಾಬಿಟ್ಟಿ ಓಡಿಸಿ ಬೆಳೆಹಾಳು ಮಾಡುತ್ತಿದ್ದಾರೆ ಇದರಿಂದಾಗಿ ರೈತರು ನೆಮ್ಮದಿ ಕಳೆದುಕೊಂಡಿದ್ದಾರೆ. ಕಾರಣ ಶೀಘ೯ವೇ ಕೂಡ್ಲಿಗಿ ಪೊಲೀಸರು ಮರಳುಗಳ್ಳರನ್ನು ಹಿಡಿದು ಪ್ರಕರಣ ದಾಖಲಿಸೋ ಮೂಲಕ ಅಕ್ರಮಕೋರ ರನ್ನು ಮಟ್ಟಹಾಕಬೇಕೆಂದು ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಾಪುರ ಗ್ರಾಮಸ್ಥರು ಹಾಗೂ ರೈತರು ಕೂಡ್ಲಿಗಿ ಪೊಲೀಸರಲ್ಲಿ ಈ ಮೂಲಕ ಮನವಿ ಮಾಡಿದ್ದಾರೆ.ಹಲವು ಬಾರಿ ಪೊಲೀಸರಲ್ಲಿ ಮನವಿ ಮಾಡಲಾಗಿದ್ದು ಪ್ರಯೋಜನವಾಗಿಲ್ಲ. ಶೀಘ೯ವೇ ಮರಳುಗಳ್ಳರನ್ನು ಮಟ್ಟಹಾಕದಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ರೈತರು ಹಾಗೂ ಗ್ರಾಮದ ಮುಖಂಡರು ಈ ಮೂಲಕ ಎಚ್ಚರಿಸಿದ್ದಾರೆ. ಹಲವು ತಿಂಗಳುಗಳಿಂದ ನಿರಂತರವಾಗಿ ನೆರೆ ಗ್ರಾಮಗಳಾದ ಹನಸಿ.ಹೊಸಕೇರಿ.ದಶಮಾಪುರ ಸೇರಿದಂತೆ ಇತರೆ ಗ್ರಾಮಗಳಿಂದ ಬರುವ ಮರಳು ಕಳ್ಳರು ಗ್ರಾಮದ ಹೊರವಲಯದಲ್ಲಿರುವ ಹಳ್ಳಕ್ಕೆ ಪ್ರತಿದಿನ ರಾತ್ರಿ ಹೊತ್ತಲ್ಲಿ ಬಹು ದಿನಗಳಿಂದ ಮರಳನ್ನು ಕದಿಯುವದರೊಂದಿಗೆ ಸುತ್ತಲಿನ ಪಂಪ್ಸೆಟ್ ಗಳ ದುಬಾರಿಬೆಲೆಯ ಸಾಮಾನುಗಳನ್ನು ಕದಿಯುತ್ತಿದ್ದಾರೆ ಕಾರಣ ಪೊಲೀಸರು ಮರಳುಗಳ್ಳರು ಹಾಗೂ ಪಂಪ್ಸೆಟ್ ಸಾಮಾಗ್ರೀ ಕಳ್ಳರನ್ನು ಶೀಘ೯ವೇ ಪತ್ತಿಹಚ್ಚಿ ರೈತರನ್ನು ನೆಮ್ಮದಿಯನ್ನು ಕಾಪಾಡಬೇಕೆಂದು ಕೂಡ್ಲಿಗಿ ಪೊಲೀಸ್ ಠಾಣಾ ಸರಹದ್ದಿನ ಹಗರಿಬೊಮ್ಮನಹಳ್ಳಿತಾಲೂಕಿನ ನಾಣ್ಯಾಪುರಗ್ರಾಮಸ್ಥರು ಮತ್ತು ರೈತ ಮುಖಂಡರು ಪೊಲೀಸರಲ್ಲಿ ಈ ಮೂಲಕ ಒತ್ತಾಯಿಸಿದ್ದಾರೆ.ಈ ಹಿಂದೆ ಹಲವುಬಾರಿ ಈ ಸಂಬಂಧ ಪೊಲೀಸರಲ್ಲಿ ಮನವಿಮಾಡಲಾಗಿತ್ತಾದರೂ ಮರಳುಗಳ್ಳರನ್ನು ಹಿಡಿದು ಅವರಿಂದ ಹಣಪಡೆದು ಕೈಬಿಟ್ಟಿರುವುದಾಗಿ ತಿಳಿದುಬಂದಿದ್ದು. ಹೀಗೆ ಮುಂದುವರೆದಲ್ಲಿ ಮರಳುಗಳ್ಳರ ಹಾವಳಿ ಹಾಗೂ ಪೊಲೀಸರ ನಿಲ೯ಕ್ಷತೆ ವಿರುದ್ದ ಎಸ್ಪಿ ಅವರಲ್ಲಿ ದೂರುನೀಡಲಾಗುವುದೆಂದು ನಾಣ್ಯಾಪುರ ಗ್ರಾಮಸ್ಥರು ಹಾಗೂ ರೈತರು ಈ ಮೂಲಕ ಎಚ್ಚರಿಸಿದ್ದಾರೆ.ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428
bigtvnews | Hubli Dharwad News | Kannada News | Karnataka News Hubli News | News In Hubli | Local news





