ಮಧ್ಯಪ್ರದೇಶ : ಇಷ್ಟವಿಲ್ಲದೇ ಇದ್ದರೂ ಬಲವಂತವಾಗಿ ಸೆಕ್ಸ್ ಮಾಡಲು ಮುಂದಾದ ಪತಿಯ ಮರ್ಮಾಂಗವನ್ನೇ ಪತ್ನಿ ಕತ್ತರಿಸಿದ ಘಟನೆ ಮಧ್ಯಪ್ರದೇಶದ ಟಿಕಮ್ಗಢದಲ್ಲಿ ನಡೆದಿದೆ. ಟಿಕಮ್ ಗಢ ಜಿಲ್ಲೆಯಿಂದ 40 ಕಿಮೀ ದೂರದ ಜತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಮನಗರದಲ್ಲಿ ಡಿ. 7ರಂದು ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
24 ವರ್ಷದ ಪತ್ನಿ ಬೇಡ ಅಂದರೂ ಬಲವಂತವಾಗಿ ರಾತ್ರಿ ದೈಹಿಕ ಸಂಬಂಧ ಬೆಳೆಸಲು 26 ವರ್ಷದ ಗಂಡ ಮುಂದಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿ ಚಾಕುವಿನಿಂದ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾಳೆ. ಗಂಡ-ಹೆಂಡತಿ ನಡುವೆ ದೈಹಿಕ ಸಂಬಂಧದ ವಿಚಾರವಾಗಿ ಜಗಳ ನಡೆಯುತ್ತಿತ್ತು. ಪತ್ನಿ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಲು ಮುಂದಾಗಿದ್ದರಿಂದ ಕೋಪಗೊಂಡಿರುವ ಮಹಿಳೆ ಆತನ ಮರ್ಮಾಂಗ ಕತ್ತರಿಸಿದ್ದಾಳೆ. ಡಿಸೆಂಬರ್ 13ರಂದು ಠಾಣೆಗೆ ಬಂದು ದೂರು ನೀಡಿದ್ದಾನೆ. ಘಟನೆ ನಡೆದ ತಕ್ವಣವೇ ಆತ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆಂದು ಎಂದು ಜಾತಾರಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ತ್ರಿವೇಂದ್ರ ತ್ರಿವೇದಿ ಹೇಳಿದ್ದಾರೆ.
2019ರಲ್ಲಿ ಇಬ್ಬರು ಮದುವೆಯಾಗಿದ್ದು, ಇದಾದ ಕೆಲ ತಿಂಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಇದೇ ಕಾರಣಕ್ಕಾಗಿ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಈಗಾಗಲೇ ಪತ್ನಿ ವಿರುದ್ಧ ಐಪಿಸಿ ಸೆಕ್ಷನ್ 324ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

